HomeEntertainmentರಾಮಾಯಣ ಚಿತ್ರದಲ್ಲಿ ರಾವಣನಾಗಿ ನಟಿಸಿದ ಯಶ್ ನಿರ್ಧಾರ: ನಟಿ ಸಾಯಿ ಪಲ್ಲವಿ ಮೆಚ್ಚುಗೆಯ ಮಾತುಗಳು

ರಾಮಾಯಣ ಚಿತ್ರದಲ್ಲಿ ರಾವಣನಾಗಿ ನಟಿಸಿದ ಯಶ್ ನಿರ್ಧಾರ: ನಟಿ ಸಾಯಿ ಪಲ್ಲವಿ ಮೆಚ್ಚುಗೆಯ ಮಾತುಗಳು

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಪ್ರಚಾರ ಕಾರ್ಯಗಳು ದೇಶದ ವಿವಿಧ ನಗರಗಳಲ್ಲಿ ಜೋರಾಗಿ ಸಾಗುತ್ತಿವೆ. ಹೈದರಾಬಾದ್‌ನಲ್ಲಿ ನಡೆದ ಇತ್ತೀಚಿನ ಕಾರ್ಯಕ್ರಮದಲ್ಲಿ ಸಿನಿಮಾದಲ್ಲಿ ಸೀತೆಯಾಗಿ ನಟಿಸಿರುವ ಜನಪ್ರಿಯ ನಟಿ ಸಾಯಿ ಪಲ್ಲವಿ ಅವರು ರಾಕ್ಷಸ ರಾಜ ರಾವಣನ ಪಾತ್ರದಲ್ಲಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಾಮಾನ್ಯವಾಗಿ ದೊಡ್ಡ ನಟರು ನೆಗೆಟಿವ್ ಶೇಡ್ ಇರುವ ಪಾತ್ರಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ರಾಾವಣನ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಯಶ್ ಪ್ರೇಕ್ಷಕರ ಮನಸ್ಸಿನಲ್ಲಿ ದ್ವೇಷದ ಬದಲಿಗೆ ಅಪಾರ ಪ್ರೀತಿಯನ್ನು ಸಂಪಾದಿಸಿದ್ದಾರೆ ಎಂದು ಸಾಯಿ ಪಲ್ಲವಿ ಅಭಿಪ್ರಾಯಪಟ್ಟಿದ್ದಾರೆ. ತಾವು ಸಹ-ನಿರ್ಮಾಪಕರಾಗಿದ್ದರೂ ರಾಮನ ಪಾತ್ರದ ಬದಲು ರಾವಣನ ಪಾತ್ರವನ್ನೇ ಆರಿಸಿಕೊಂಡಿದ್ದೇಕೆ ಎಂಬುದರ ಕುರಿತು ಯಶ್ ಕೂಡ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ರಾಮನ ಒಳ್ಳೆಯತನವನ್ನು ತೆರೆಮೇಲೆ ಪರಿಣಾಮಕಾರಿಯಾಗಿ ತೋರಿಸಬೇಕಾದರೆ, ರಾವಣನ ಕೆಡುಕು ಕೂಡ ಅಷ್ಟೇ ಬಲವಾಗಿರಬೇಕು ಎಂಬ ಕಾರಣಕ್ಕೆ ತಾವು ಈ ಸವಾಲಿನ ಪಾತ್ರವನ್ನು ಒಪ್ಪಿಕೊಂಡಿದ್ದಾಗಿ ಯಶ್ ಸ್ಪಷ್ಟಪಡಿಸಿದ್ದರು.

ಇನ್ನು ಪ್ರಪಂಚದಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಈ ಬ್ರಹ್ಮಾಂಡ ಚಿತ್ರವು ಸೌಂದರ್ಯ ಮತ್ತು ತಾಂತ್ರಿಕತೆಯಲ್ಲಿ ಹಾಲಿವುಡ್ ಸಿನಿಮಾಗಳಿಗೂ ಸವಾಲು ಒಡ್ಡಲಿದೆ. ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಇದರ ಮೊದಲ ಭಾಗವು ಮುಂಬರುವ ನವೆಂಬರ್ ಐದರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular