HomeLatest NewsBIG NEWS: ಅನಿಲ್ ಅಂಬಾನಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ಸಿಬಿಐ

BIG NEWS: ಅನಿಲ್ ಅಂಬಾನಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ಸಿಬಿಐ

ಮುಂಬೈ: ರಿಲಾಯನ್ಸ್ ಗ್ರೂಪ್​ನ ಮುಖ್ಯಸ್ಥ ಅನಿಲ್ ಅಂಬಾನಿ ಅವರ ಮುಂಬೈ ನಿವಾಸವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ಬೆನ್ನಲ್ಲೇ ಇಂದು ಸಿಬಿಐ ಅನಿಲ್ ಅಂಬಾನಿ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ.

2013ರಿಂದ 2017ರ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾಗೆ 2,223.17 ಕೋಟಿ ರೂ ವಂಚನೆ ಆರೋಪದಲ್ಲಿ ಅನಿಲ್ ಅಂಬಾನಿ ಹಾಗೂ ಆರ್​ಕಾಂ ಕಂಪನಿ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಯಾಂಕ್​ಗೆ ನಷ್ಟ ತರಲಾಗಿದೆ ಎಂದು ಅನಿಲ್ ಅಂಬಾನಿ, ಆರ್​ಕಾಂ, ಸರ್ಕಾರಿ ಅಧಿಕಾರಿಗಳು ಮತ್ತಿತರರ ವಿರುದ್ಧ ಸ್ವತಃ ಬ್ಯಾಂಕ್​ನಿಂದಲೇ ಎಫ್​ಐಆರ್ ದೂರು ದಾಖಲಾಗಿತ್ತು. ವಂಚನೆ, ಅಪರಾಧ ಸಂಚು ಇತ್ಯಾದಿಗೆ ಸಂಬಂಧಿಸಿದ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಿಲಾಯನ್ಸ್ ಕಮ್ಯೂನಿಕೇಶನ್ (ಆರ್​ಕಾಂ) ವಿರುದ್ಧದ ವಂಚನೆ ಪ್ರಕರಣ ಸಂಬಂಧ ಅನಿಲ್ ಅಂಬಾನಿ ಅವರ ಮುಂಬೈನ ಪಾಲಿ ಹಿಲ್ ಮನೆಯನ್ನು ಜಾರಿ ನಿರ್ದೇಶನಾಲಯ ಫೆ. 25ರಂದು ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಪಾಲಿ ಹಿಲ್​ನಲ್ಲಿರುವ ಅಂಬಾನಿಯ ಈ ಮನೆಯ ಮೌಲ್ಯ 3,716.83 ಕೋಟಿ ರೂ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಮುಂಬೈನಲ್ಲೇ ಇರುವ ಅಂಬಾನಿಯ 473.17 ಕೋಟಿ ರು ಮೌಲ್ಯದ ಇನ್ನೊಂದು ಪ್ರಾಪರ್ಟಿಯನ್ನೂ ಇಡಿ ಅಟ್ಯಾಚ್ ಮಾಡಿತ್ತು. ಇದರೊಂದಿಗೆ ಮುಟ್ಟುಗೋಲು ಹಾಕಿಕೊಳ್ಳಲಾದ ರಿಲಾಯನ್ಸ್ ಗ್ರೂಪ್ ಹಾಗೂ ಅನಿಲ್ ಅಂಬಾನಿಯವರ ಒಟ್ಟು ಆಸ್ತಿ ಮೌಲ್ಯ 15,700 ಕೋಟಿ ರೂ ಆಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular