ಬೆಂಗಳೂರು: ಹೊಸ ವರ್ಷ 2026 ಆರಂಭವಾದ ಬೆನ್ನಲ್ಲೇ ಭಕ್ತರಿಗೆ ಒಂದು ಸುವರ್ಣಾವಕಾಶ ಒದಗಿಬಂದಿದೆ. ನಾಳೆ, ಅಂದರೆ ಜನವರಿ 6, ಮಂಗಳವಾರ, ವರ್ಷದ ಮೊದಲ ಸಂಕಷ್ಟ ಚತುರ್ಥಿ ಬಂದಿದೆ. ವಿಶೇಷವೆಂದರೆ ಇದು ಮಂಗಳವಾರ ಬಂದಿರುವುದರಿಂದ ಇದನ್ನು ‘ಅಂಗಾರಕ ಸಂಕಷ್ಟ ಚತುರ್ಥಿ’ ಎಂದು ಕರೆಯಲಾಗುತ್ತದೆ. ಉಳಿದೆಲ್ಲಾ ಸಂಕಷ್ಟಿಗಳಿಗಿಂತ ಈ ದಿನ ಅತ್ಯಂತ ಶ್ರೇಷ್ಠ ಮತ್ತು ಅಪರೂಪದ್ದಾಗಿದೆ.
ಏನಿದು ಅಂಗಾರಕ ಸಂಕಷ್ಟಿಯ ಮಹಿಮೆ?
ಸಂಕಷ್ಟ ಚತುರ್ಥಿ ಎಂದರೆ ವಿಘ್ನನಿವಾರಕ ಗಣಪತಿಗೆ ಮೀಸಲಾದ ದಿನ. ಚತುರ್ಥಿ ತಿಥಿಯು ಮಂಗಳವಾರದಂದು ಬಂದರೆ ಅದನ್ನು ‘ಅಂಗಾರಕ’ ಎಂದು ಕರೆಯುತ್ತಾರೆ. ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಪ್ರಶಸ್ತ. ಇತ್ತ ಗಣೇಶ, ಅತ್ತ ಸುಬ್ರಹ್ಮಣ್ಯ ಈ ಇಬ್ಬರು ದೇವತೆಗಳ ಅನುಗ್ರಹ ಪಡೆಯಲು ಇದು ಅತ್ಯಂತ ಶುಭ ದಿನ. ಈ ದಿನ ವ್ರತ ಆಚರಿಸುವುದರಿಂದ ಜೀವನದಲ್ಲಿರುವ ಸಾಲದ ಬಾಧೆ, ಆರ್ಥಿಕ ಮುಗ್ಗಟ್ಟು ಹಾಗೂ ವಿಘ್ನಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.
ಶಿವನಿಗೆ ಪ್ರಿಯವಾದ ಶ್ರಾವಣ ಮಾಸದ ಈ ಸಮಯದಲ್ಲಿ, ಆತನ ಪುತ್ರನಾದ ಗಣೇಶನ ಆರಾಧನೆ ಮಾಡುವುದು ವಿಶೇಷ ಫಲದಾಯಕ. ಈ ದಿನ ಭಕ್ತಿಯಿಂದ ವಿಘ್ನನಿವಾರಕನನ್ನು ಪೂಜಿಸಿದರೆ, ಆತನ ವಿಶೇಷ ಆಶೀರ್ವಾದದ ಜೊತೆಗೆ ಜೀವನದ ಅಡೆತಡೆಗಳು ಮಂಜಿನಂತೆ ಕರಗುತ್ತವೆ ಎಂಬ ನಂಬಿಕೆಯಿದೆ.
ಪೂಜಾ ವಿಧಿ-ವಿಧಾನಗಳು ಹೀಗಿರಲಿ:
ಗಣೇಶನ ಕೃಪೆಗೆ ಪಾತ್ರರಾಗಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:
ಸಂಕಲ್ಪ: ಮುಂಜಾನೆ ಬೇಗ ಎದ್ದು ಸ್ನಾನ ಮುಗಿಸಿ, ಸ್ವಚ್ಛವಾದ ಬಟ್ಟೆ ಧರಿಸಿ ಪೂಜೆಗೆ ಸಿದ್ಧರಾಗಿ.
ಅರ್ಘ್ಯ: ಸೂರ್ಯನಿಗೆ ಅರ್ಘ್ಯ ಅರ್ಪಿಸಿ ‘ವಕ್ರತುಂಡ ಮಹಾಕಾಯ’ ಮಂತ್ರ ಪಠಿಸಿ.
ನೈವೇದ್ಯ: ಗಣೇಶನಿಗೆ ಪ್ರಿಯವಾದ ದೂರ್ವೆ (ಗರಿಕೆ), ಬೆಲ್ಲ, ಹೂವು, ಮೋದಕ ಹಾಗೂ ಲಡ್ಡುಗಳನ್ನು ಸಮರ್ಪಿಸಿ.
ಪಠಣ: ಸಂಕಷ್ಟಹರ ಗಣೇಶ ಸ್ತೋತ್ರ ಮತ್ತು ಗಣೇಶ ಪಂಚ ರತ್ನಂ ಪಠಿಸುವುದು ವಿಶೇಷ ಫಲ ನೀಡುತ್ತದೆ.
ಉಪವಾಸ ಮುರಿಯುವುದು ಹೇಗೆ?
ಸಂಕಷ್ಟ ಚತುರ್ಥಿ ಪೂಜೆಯು ಚಂದ್ರೋದಯದ ನಂತರವೇ ಪೂರ್ಣಗೊಳ್ಳುತ್ತದೆ. ದಿನವಿಡೀ ಉಪವಾಸವಿದ್ದು, ರಾತ್ರಿ ಚಂದ್ರ ದರ್ಶನದ ನಂತರ ಚಂದ್ರನಿಗೆ ಪೂಜೆ ಸಲ್ಲಿಸಿ, ನೈವೇದ್ಯ ಸ್ವೀಕರಿಸುವ ಮೂಲಕ ವ್ರತವನ್ನು ಮುಕ್ತಾಯಗೊಳಿಸಬೇಕು.
ಯಾರಿಗೆ ಇದು ವಿಶೇಷ?
ವಿದ್ವಾಂಸರ ಪ್ರಕಾರ, ಯಾರು ಜೀವನದಲ್ಲಿ ಪದೇ ಪದೇ ಅಡೆತಡೆಗಳನ್ನು ಎದುರಿಸುತ್ತಿದ್ದಾರೋ ಅಥವಾ ಯಾರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೋ ಅವರು ನಾಳೆ ಗಣಪನಿಗೆ ತೆಂಗಿನಕಾಯಿ ಮತ್ತು ಬೆಲ್ಲದ ನೈವೇದ್ಯ ಅರ್ಪಿಸುವುದರಿಂದ ಶೀಘ್ರವೇ ನೆಮ್ಮದಿ ಪಡೆಯಬಹುದು.
ಹೊಸ ವರ್ಷದ ಮೊದಲ ತಿಂಗಳಲ್ಲೇ ಇಂತಹ ಶ್ರೇಷ್ಠ ವ್ರತ ಬಂದಿರುವುದು ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಕ್ತರಲ್ಲಿ ಹೊಸ ಹುರುಪು ಮೂಡಿಸಿದೆ.ಶಿವನಿಗೆ ಪ್ರಿಯವಾದ ಶ್ರಾವಣ ಮಾಸದ ಈ ಸಮಯದಲ್ಲಿ, ಆತನ ಪುತ್ರನಾದ ಗಣೇಶನ ಆರಾಧನೆ ಮಾಡುವುದು ವಿಶೇಷ ಫಲದಾಯಕ.
ಪೂಜೆಯ ವೇಳೆ ಪಠಿಸಬೇಕಾದ ಶಕ್ತಿಶಾಲಿ ಮಂತ್ರಗಳು:
ಈ ಕೆಳಗಿನ ಮಂತ್ರಗಳನ್ನು ಪಠಿಸುವುದರಿಂದ ಗಣೇಶನು ಶೀಘ್ರವೇ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ:
ಮೂಲ ಮಂತ್ರ:
ಓಂ ಶ್ರೀ ಗಣೇಶಾಯ ನಮಃ ಓಂ ಗಣ ಗಣಪತಯೇ ನಮಃ
ವಿಘ್ನ ನಿವಾರಕ ಮಂತ್ರ:
ಓಂ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ
ದೋಷ ನಿವಾರಣೆಗಾಗಿ:
ಏಕದಂತಂ ಮಹಾಕಾಯಂ ಲಂಬೋದರಗಜಾನನಮ್| ವಿಘ್ನನಾಶಕರಂ ದೇವಂ ಹೇರಂಬ ಪ್ರಣಮಾಮ್ಯಹಂ||
ಕ್ಲೇಶಗಳ ನಿವಾರಣೆಗಾಗಿ:
ಓಂ ಗ್ಲೌಂ ಗೌರೀ ಪುತ್ರ, ವಕ್ರತುಂಡ, ಗಣಪತಿ ಗುರು ಗಣೇಶ ಗ್ಲೌಂ ಗಣಪತಿ, ಋದ್ಧಿ ಪತಿ, ಮೇರೇ ದೂರ ಕರೋ ಕ್ಲೇಶ||

