HomeIndiaBREAKING: ಆಂಧ್ರದಲ್ಲಿ ONGC ಪೈಪ್ ಲೈನ್ ಭೀಕರ ಸ್ಫೋಟ: ಅನಿಲ ಸೋರಿಕೆಯಿಂದ ಮುಗಿಲೆತ್ತರಕ್ಕೆ ಹೊತ್ತಿಕೊಂಡ ಬೆಂಕಿ

BREAKING: ಆಂಧ್ರದಲ್ಲಿ ONGC ಪೈಪ್ ಲೈನ್ ಭೀಕರ ಸ್ಫೋಟ: ಅನಿಲ ಸೋರಿಕೆಯಿಂದ ಮುಗಿಲೆತ್ತರಕ್ಕೆ ಹೊತ್ತಿಕೊಂಡ ಬೆಂಕಿ

ಮಲಿಕೀಪುರಂ: ಒಎನ್ ಜಿಸಿ ಪೈಪ್ ಲೈನ್ ಸ್ಫೋಟಗೊಂಡು ಅನುಲ ಸೋರಿಕೆಯಿಂದ ಭಾರಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಕೋನಸೀಮೆ ಜಿಲ್ಲೆಯ ಮಲಿಕೀಪುರಂ ಎಂಬಲ್ಲಿ ಒನ್ ಜಿಸಿ ಪೈಪ್ ಲೈನ್ ಕಾಮಗಾರಿ ನಡೆಸುತ್ತಿದ್ದ ವೇಳೆ ತೀವ್ರ ಒತ್ತಡದಿಂದಾಗಿ ಪೈಪ್ ಲೈನ್ ಸ್ಫೋಟಗೊಂಡಿದೆ. ಅನಿಲ ಸೋರಿಕೆಯಿಂದಾಗಿ ಪೈಪ್ ಲೈನನ್ನಿ ಬೆಂಕಿ ಹೊತ್ತಿಕೊಂಡಿದ್ದು, ಕಿಲೋಮೀಟರ್ ಗಟ್ಟಲೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ.

ಮುಗಿಲೆತ್ತರದವರೆಗೂ, ಸುತ್ತಮುತ್ತಲೂ ಬೆಂಕಿ ಧಗ ಧಗನೆ ಹೊತ್ತಿ ಉರಿದಿದ್ದು, ತೋಟ, ಗದ್ದೆಗಳು ಬೆಂಕಿಗೆ ಆಹುತಿಯಾಗಿವೆ. ಘಟನಾ ಸ್ಥಳಕ್ಕೆ 7ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಸುತ್ತಮುತ್ತಲ ಪ್ರದೇಶದ ಮನೆಗಳಲ್ಲಿ ಯಾರೂ ಗ್ಯಾಸ್ ಗಳನ್ನು ಆನ್ ಮಾಡದಂತೆ, ಲೈಟ್ ಗಳನ್ನು ಹಾಕದಂತೆ ಹಾಗೂ ಬೆಂಕಿ ಹಚ್ಚದಂತೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳದ ಸಮೀಪದಲ್ಲಿರುವ ಮೂರು ಗ್ರಾಮಗಳ ಜನರಿಗೆ ಜಾನುವಾರುಗಳ ಸಮೇತ ಸುರಕ್ಷಿತ ಪ್ರದೇಶಗಳಿಗೆ ತಕ್ಷಣ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಮೈಕ್ ಗಳ ಮೂಲಕವಾಗಿ ಸೂಚನೆ ನೀಡಿದ್ದಾರೆ. ಗ್ರಾಮಗಳಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular