ಉದ್ಯಮಿ ಆನಂದ್ ಮಹೀಂದ್ರಾ ಅವರು ಇದಾಗಲೇ ಕುತೂಹಲಕಾರಿ ಪೋಸ್ಟ್ಗಳನ್ನು ಮಾಡುವ ಮೂಲಕ ಜನರನ್ನು ಆಕರ್ಷಿತರನ್ನಾಗಿಸುತ್ತಾರೆ. ಇದೀಗ ಅವರು, ಹೆಚ್ಚಿನ ಇಂಧನ ಬಳಕೆ ಮತ್ತು ಪ್ರಯಾಣಿಸಲು ಹೆಚ್ಚಯ ಸಮಯ ವ್ಯಯವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದು, ಅದೀಗ ವೈರಲ್ ಆಗಿದೆ.
ಅವರು ಡಿಸೈನ್ ಒಂದನ್ನು ತಯಾರಿಸಿದ್ದು, ಜನರು ಅತಿ ಕಡಿಮೆ ಸಮಯದಲ್ಲಿ ಟ್ರಾಫಿಕ್ ಫ್ರೀಯಾಗಿ ಹೇಗೆ ಸಂಚರಿಸಬಹುದು ಎಂದು ಹೇಳಿದ್ದಾರೆ. ಈ ಕುರಿತು ಒಂದು ನಕ್ಷೆಯನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈ ವಿಡಿಯೋ ನೋಡಿ ಜನರು ಶ್ಲಾಘನೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಬೆಂಗಳೂರಿನಂಥ ಮಹಾನಗರಗಳಲ್ಲಿ ಇದು ಸ್ವಲ್ಪ ಕಷ್ಟ ಎನ್ನುತ್ತಿದ್ದರೆ, ಹಲವರು ಇದನ್ನು ಜಾರಿ ಮಾಡಿದರೆ ಟ್ರಾಫಿಕ್ ಕಿರಿಕಿರಿ ತಪ್ಪಿಸಬಹುದು ಎಂದಿದ್ದಾರೆ. ತಮ್ಮ ಮನೆಯಿಂದ ಕಚೇರಿ ತಲುಪಲು ಸಮೀಪ ಮಾರ್ಗವಿದ್ದರೂ ಸುತ್ತಿ ಬಳಸಿ ಬರುವ ಕಾರಣ, ಇಂಧನ ಸಿಕ್ಕಾಪಟ್ಟೆ ಖರ್ಚಾಗುತ್ತದೆ, ಜೊತೆಗೆ ಸಮಯ ಕೂಡ. ಈ ಮಾರ್ಗವನ್ನು ಅನುಸರಿಸಿದರೆ ಖಂಡಿತ ತಮ್ಮಂಥ ಎಷ್ಟೋ ಮಂದಿಗೆ ಉಪಯೋಗ ಆಗಲಿದೆ ಎಂದು ಹಲವರು ತಿಳಿಸಿದ್ದಾರೆ.
Fascinating. A design by a Yemeni engineer Muhammad Awas (developed in 2016) which continuously regulates traffic without traffic lights using ‘half round-abouts'. But does it involve a higher use of fuel?
[source: https://t.co/iBIxKgbDzs] https://t.co/83UV1vjmTb
— anand mahindra (@anandmahindra) February 23, 2023

