HomeAutoಆಂಪಿಯರ್‌‌ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲಿ ಭಾರೀ ಏರಿಕೆ

ಆಂಪಿಯರ್‌‌ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲಿ ಭಾರೀ ಏರಿಕೆ

ದೇಶದ ಇವಿ ದ್ವಿಚಕ್ರ ಮಾರುಕಟ್ಟೆಯ ಸೇಲ್ಸ್ ಪಟ್ಟಿಯಲ್ಲಿ ಅಗ್ರ ಮೂರರಲ್ಲಿ ಒಂದಾದ ಆಂಪಿಯರ್‌‌ ಫೇಂ-2 ಸಬ್ಸಿಡಿ ಯೋಜನೆಯ ಅರ್ಹತೆಯನ್ನು ಕಾಪಾಡಿಕೊಂಡಿದೆ.

ಸಬ್ಸಿಡಿ ಕಾರಣದಿಂದ ಆಂಪಿಯರ್‌ ದ್ವಿಚಕ್ರ ವಾಹನದ ಬೆಲೆ ಕಡಿಮೆಯಾದರೂ ಸಹ, ಕಂಪನಿಯ ಉತ್ಪನ್ನಗಳ ಬೆಲೆ ಏರಿಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಂಪಿಯರ್‌‌ ರೇಂಜ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗುವ ಜ಼ೀಲ್ ಇಎಕ್ಸ್‌ನ ಬೆಲೆಯನ್ನು 20,900ರೂಗಳಿಗೆ ಏರಿಸಲಾಗಿದೆ. ಮಧ್ಯಮ ಶ್ರೇಣಿಯ ಮ್ಯಾಗ್ನಸ್ ಇಎಕ್ಸ್‌ ಬೆಲೆಯನ್ನು 21,000ರೂನಷ್ಟು ಏರಿಸಲಾಗಿದ್ದು, ಈ ಸ್ಕೂಟರ್‌ನ ಬೆಲೆ 1,04,900ರೂನಷ್ಟಿದೆ. ಈ ಎರಡೂ ಸ್ಕೂಟರ್‌ಗಳು ಒಮ್ಮೆ ಚಾರ್ಜ್ ಆದರೆ ’80-100’ಕಿಮೀ ನಷ್ಟು ದೂರ ಸಾಗಬಲ್ಲವು.

ಎಲ್‌ಎಫ್‌ಪಿ ಬ್ಯಾಟರಿ ಬಳಸುವ ಪ್ರೈಮಸ್ ಮಾಡೆಲ್‌ನ ಬೆಲೆಯನ್ನು 40,000ರೂಗಳಿಗೆ ಏರಿಕೆ ಮಾಡಿ 1.49 ಲಕ್ಷ ರೂಗೆ ನಿಗದಿ ಪಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular