HomeKarnataka'ಅಂಬಿ ಅಮರ, ಸ್ವರ್ಗದಲ್ಲೂ ಸುಖವಾಗಿರಿ' : ಅಂಬರೀಷ್ ಹುಟ್ಟು ಹಬ್ಬಕ್ಕೆ ಸುಮಲತಾ ಪೋಸ್ಟ್

‘ಅಂಬಿ ಅಮರ, ಸ್ವರ್ಗದಲ್ಲೂ ಸುಖವಾಗಿರಿ’ : ಅಂಬರೀಷ್ ಹುಟ್ಟು ಹಬ್ಬಕ್ಕೆ ಸುಮಲತಾ ಪೋಸ್ಟ್

ಬೆಂಗಳೂರು : ಹಿರಿಯ ನಟ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಅವರ ಕುಟುಂಬದವರು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಂಬಿ ಸಮಾಧಿ ಬಳಿ ಆಚರಿಸಿದರು. ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಹಿರಿಯ ನಟ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ ಅಂಬರೀಷ್ ಪೋಸ್ಟ್ ಮಾಡಿದ್ದಾರೆ.

‘’ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವನ್ನು ನೆನೆಸಿಕೊಂಡಾಗ ಮುಗುಳು ನಗೆ ಮೂಡುತ್ತದೆನಿಮ್ಮ ಅಗಲಿಕೆಯ ಬಗ್ಗೆ ನೆನೆದಾಗಲೆಲ್ಲ ನೋವುಂಟಾಗುತ್ತದೆ. ಆದರೆ ನೀವು ಎಂದೆಂದಿಗೂ ನಮ್ಮೊಂದಿಗೇ ಇದ್ದೀರಿ, ಅನುಕ್ಷಣವೂ ಅನುದಿನವೂ ನೀವೇ ನಮ್ಮ ಜೀವನ…ಅಂಬಿ ಅಮರ… ಸ್ವರ್ಗದಲ್ಲೂ ಸುಖವಾಗಿರಿ ಎಂದು ಜನ್ಮದಿನದಂದು ಪ್ರೀತಿಯ ಶುಭ ಹಾರೈಕೆಗಳು’’ ಎಂದು ಸುಮಲತಾ ಅಂಬರೀಷ್ ಪೋಸ್ಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular