HomeEntertainmentಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಆಲ್ಫಾ: ಭಾರಿ ಬಜೆಟ್ ಚಿತ್ರಕ್ಕೆ ಎರಡನೇ ವೀಕೆಂಡ್‌ನಲ್ಲೂ ಹಿನ್ನಡೆ!

ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಆಲ್ಫಾ: ಭಾರಿ ಬಜೆಟ್ ಚಿತ್ರಕ್ಕೆ ಎರಡನೇ ವೀಕೆಂಡ್‌ನಲ್ಲೂ ಹಿನ್ನಡೆ!

ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ಆಲ್ಫಾ’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲು ಪರದಾಡುತ್ತಿದೆ. ಆಲಿಯಾ ಭಟ್ ಮತ್ತು ಶರ್ವರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಜುಲೈ 3 ರಂದು ತೆರೆಕಂಡಿತ್ತು. ಆರಂಭದಲ್ಲಿ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ನೆಗೆಟಿವ್ ಪ್ರತಿಕ್ರಿಯೆಗಳು ಚಿತ್ರದ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡಿವೆ. ಮೊದಲ ವಾರಾಂತ್ಯದಲ್ಲಿ ಉತ್ತಮ ಗಳಿಕೆ ಮಾಡಿದ್ದ ಸಿನಿಮಾ, ವಾರದ ದಿನಗಳಲ್ಲಿ ತೀವ್ರ ಕುಸಿತ ಕಂಡಿತು.

ಮೊದಲ ವಾರದಲ್ಲಿ ಭಾರತೀಯ ಮಾರುಕಟ್ಟೆಯಿಂದ ಒಟ್ಟು 47.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದ ಆಲ್ಫಾ ಚಿತ್ರಕ್ಕೆ, ಎರಡನೇ ವಾರಾಂತ್ಯ ಅತ್ಯಂತ ನಿರ್ಣಾಯಕವಾಗಿತ್ತು. ಆದರೆ ಎರಡನೇ ವೀಕೆಂಡ್‌ನಲ್ಲೂ ಚಿತ್ರ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ, ಚಿತ್ರವು ಎರಡನೇ ಶುಕ್ರವಾರ ಕೇವಲ 1.65 ಕೋಟಿ ರೂಪಾಯಿ ಗಳಿಸಿತ್ತು. ಇನ್ನು ಶನಿವಾರ ಮತ್ತು ಭಾನುವಾರ ತಲಾ 2.25 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ತವಾಗಿದೆ. ಈ ಮೂಲಕ ತನ್ನ ಎರಡನೇ ವೀಕೆಂಡ್‌ನಲ್ಲಿ ಒಟ್ಟು 6.15 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರೊಂದಿಗೆ ಚಿತ್ರ ಬಿಡುಗಡೆಯಾದ 10 ದಿನಗಳಲ್ಲಿ ಭಾರತದಲ್ಲಿ ಒಟ್ಟು 53.60 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದಂತಾಗಿದೆ.

ವಿಶ್ವದಾದ್ಯಂತ ಈ ಚಿತ್ರವು ಇದುವರೆಗೆ ಒಟ್ಟು 89.41 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಮಹಿಳಾ ಪ್ರಧಾನ ಆಕ್ಷನ್ ಚಿತ್ರವೊಂದಕ್ಕೆ ಈ ಗಳಿಕೆ ಕೆಟ್ಟದ್ದೇನಲ್ಲದಿದ್ದರೂ, ಚಿತ್ರದ ಭಾರಿ ಬಜೆಟ್ ಈಗ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ನಿರ್ಮಾಣ ಸಂಸ್ಥೆಯಾದ ವೈಆರ್‌ಎಫ್ ಚಿತ್ರದ ಬಜೆಟ್ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲವಾದರೂ, ವರದಿಗಳ ಪ್ರಕಾರ ಚಿತ್ರಕ್ಕಾಗಿ ಸುಮಾರು 100 ರಿಂದ 130 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ಬಜೆಟ್‌ಗೆ ಹೋಲಿಸಿದರೆ ಶಿವ ರವೈಲ್ ನಿರ್ದೇಶನದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋಲಿನತ್ತ ಮುಖ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದ ವಿಮರ್ಶೆಗಳ ಬಗ್ಗೆ ಹೇಳುವುದಾದರೆ, ಟ್ರೈಲರ್ ಮತ್ತು ಟೀಸರ್ ನೋಡಿ ಅಂದುಕೊಂಡಷ್ಟು ಚಿತ್ರವೇನೂ ಕೆಟ್ಟದಾಗಿಲ್ಲ. ಇದೊಂದು ಕ್ಲಾಸಿ ಆಕ್ಷನ್ ಎಂಟರ್‌ಟೈನರ್ ಆಗಿದ್ದು, ಚಿತ್ರಮಂದಿರಗಳಲ್ಲಿ ಒಮ್ಮೆ ನೋಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಚಿತ್ರವನ್ನು ಧುರಂಧರ್ ಸಿನಿಮಾಗೆ ಹೋಲಿಸದೇ ನೋಡಿದರೆ ಆಲಿಯಾ ಭಟ್ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular