HomeLatest NewsALERT : ಹೆಚ್ಚುತ್ತಿದೆ ಹೊಸ 'ವಾಟ್ಸಾಪ್' ವಂಚನೆ ; ಕಾರ್ಪೊರೇಟ್ ಕಂಪನಿಗಳೇ ಟಾರ್ಗೆಟ್.!

ALERT : ಹೆಚ್ಚುತ್ತಿದೆ ಹೊಸ ‘ವಾಟ್ಸಾಪ್’ ವಂಚನೆ ; ಕಾರ್ಪೊರೇಟ್ ಕಂಪನಿಗಳೇ ಟಾರ್ಗೆಟ್.!

ನಿಮ್ಮ ಕಂಪನಿಯ ಬಾಸ್ ಅಥವಾ ಸಿಇಒ ಹೆಸರಿನಲ್ಲಿ ವಾಟ್ಸಾಪ್ ಮೆಸೇಜ್ ಬಂದಿದೆಯೇ? ‘ತುರ್ತಾಗಿ ಹಣ ವರ್ಗಾವಣೆ ಮಾಡಿ’ ಎಂಬ ಸಂದೇಶ ನೋಡಿ ತಕ್ಷಣ ಹಣ ಕಳುಹಿಸುವ ಮುನ್ನ ಎಚ್ಚರ! ಸೈಬರ್ ವಂಚಕರು ಈಗ ಕಾರ್ಪೊರೇಟ್ ಕಂಪನಿಗಳನ್ನೇ ಗುರಿಯಾಗಿಸಿಕೊಂಡು ಹೊಸ ಮಾದರಿಯ ‘ವಾಟ್ಸಾಪ್ ಇಂಪರ್ಸನೇಷನ್’ ದೋಖಾ ಆರಂಭಿಸಿದ್ದಾರೆ. ಈ ಬಗ್ಗೆ ಹೈದರಾಬಾದ್ ಸಿಪಿ ಸಜ್ಜನ್ ನಾರ್ ನೀಡಿರುವ ಬಿಗ್ ಅಲರ್ಟ್ ಇಲ್ಲಿದೆ.”

ಕಾರ್ಪೊರೇಟ್ ಸಂಸ್ಥೆಗಳ ಅಕೌಂಟೆಂಟ್‌ಗಳೇ ಸೈಬರ್ ಅಪರಾಧಿಗಳ ಹೊಸ ಟಾರ್ಗೆಟ್. ಕಂಪನಿಯ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಾಟ್ಸಾಪ್ ಸಂದೇಶ ಕಳುಹಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿರುವ ಜಾಲವೊಂದನ್ನು ಹೈದರಾಬಾದ್ ಪೊಲೀಸರು ಪತ್ತೆಹಚ್ಚಿದ್ದಾರೆ. ವಾಟ್ಸಾಪ್ ವೆಬ್ ಬಳಸುವಾಗ ಮಾಡುವ ಸಣ್ಣ ತಪ್ಪು ಹೇಗೆ ಕಂಪನಿಯನ್ನು ಬೀದಿಗೆ ತರಬಲ್ಲದು ಎಂಬ ಆಘಾತಕಾರಿ ಮಾಹಿತಿ ಇಲ್ಲಿದೆ. ನಿಮ್ಮ ಕಂಪ್ಯೂಟರ್‌ಗೆ ಫಿಶಿಂಗ್ ಲಿಂಕ್ ಕಳುಹಿಸಿ, ನಿಮ್ಮ ವಾಟ್ಸಾಪ್ ನಿಯಂತ್ರಣ ಪಡೆದು, ನಿಮ್ಮ ಹೆಸರಲ್ಲೇ ಹಣ ಲೂಟಿ ಮಾಡುವ ಜಾಲ ಸಕ್ರಿಯವಾಗಿದೆ

ಹೌದು.   ಸೈಬರ್ ಅಪರಾಧಿಗಳು ಈಗ ದೊಡ್ಡ ದೊಡ್ಡ ವ್ಯಾಪಾರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹೊಸ ಮಾದರಿಯ ‘ವಾಟ್ಸಾಪ್ ಇಂಪರ್ಸನೇಷನ್ ಫ್ರಾಡ್’ (WhatsApp Impersonation Fraud) ನಡೆಸುತ್ತಿದ್ದಾರೆ. ಈ ಕುರಿತು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನ್ ನಾರ್ ಅವರು ಕಂಪನಿಗಳಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.ಮೊದಲು ಕಂಪನಿಯ ಅಧಿಕೃತ ಇಮೇಲ್‌ಗಳಿಗೆ ಹಾನಿಕಾರಕ ‘ಫಿಶಿಂಗ್’ ಲಿಂಕ್‌ಗಳನ್ನು ಕಳುಹಿಸಲಾಗುತ್ತದೆ. ಈ ಲಿಂಕ್ ಕ್ಲಿಕ್ ಮಾಡಿದರೆ ‘ಮಾಲ್ವೇರ್’ ಮೂಲಕ ಕಂಪ್ಯೂಟರ್‌ನ ಸಂಪೂರ್ಣ ನಿಯಂತ್ರಣವನ್ನು ವಂಚಕರು ಪಡೆಯುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಟ್ಸಾಪ್ ವೆಬ್ ಬಳಕೆ: ಕಂಪ್ಯೂಟರ್‌ನಲ್ಲಿ ಲಾಗಿನ್ ಆಗಿರುವ WhatsApp Web ಅನ್ನು ಬಳಸಿಕೊಂಡು, ಕಂಪನಿಯ CEO ಅಥವಾ CFO ಅವರ ಹೆಸರಿನಲ್ಲಿ ಅಕೌಂಟೆಂಟ್‌ಗಳಿಗೆ ಸಂದೇಶ ಕಳುಹಿಸುತ್ತಾರೆ.

ತುರ್ತು ಹಣ ವರ್ಗಾವಣೆ: “ನಾನು ಮೀಟಿಂಗ್‌ನಲ್ಲಿದ್ದೇನೆ, ಫೋನ್ ಎತ್ತಲು ಸಾಧ್ಯವಿಲ್ಲ. ಕೂಡಲೇ ಈ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡಿ” ಎಂದು ನಂಬಿಸಿ ಹಣವನ್ನು ಲೂಟಿ ಮಾಡುತ್ತಾರೆ.

ದೃಢೀಕರಣ: ವಾಟ್ಸಾಪ್‌ನಲ್ಲಿ ಮೇಲಧಿಕಾರಿಗಳ ಹೆಸರಿನಲ್ಲಿ ಹಣದ ಬೇಡಿಕೆ ಬಂದಾಗ ನಂಬಬೇಡಿ. ತಕ್ಷಣ ಆ ಅಧಿಕಾರಿಗೆ ಫೋನ್ ಮಾಡಿ ಮಾಹಿತಿ ಖಚಿತಪಡಿಸಿಕೊಳ್ಳಿ.

ಸುರಕ್ಷತೆ: ಆಫೀಸ್ ಸಿಸ್ಟಮ್‌ಗಳಲ್ಲಿ ಗುಣಮಟ್ಟದ ಆ್ಯಂಟಿವೈರಸ್ ಮತ್ತು ಫೈರ್‌ವಾಲ್ ಅಳವಡಿಸಿ.

ಲಾಗೌಟ್ ಕಡ್ಡಾಯ: ವಾಟ್ಸಾಪ್ ವೆಬ್ ಬಳಸಿದ ನಂತರ ಪ್ರತಿಯೊಂದು ಬಾರಿಯೂ ತಪ್ಪದೇ ‘Log out’ ಮಾಡಿ.

ಸಹಾಯವಾಣಿ: ಸೈಬರ್ ವಂಚನೆಗೆ ಒಳಗಾದ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ನೀಡಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular