ಹೈದರಾಬಾದ್: ಪತಿ ಮಹಾಶಯನ ಗಂಡು ಮಗು ಬೇಕೆಂಬ ಅಂಧಾಭಿಮಾನಕ್ಕೆ ಪತ್ನಿ ಹಾಗೂ ಇಬ್ಬರು ಹೆಣ್ನು ಮಕ್ಕಳು ಬಲಿಯಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಗಂಡು ಮಗು ಇಲ್ಲ ಎಂಬ ಕಾರಣಕ್ಕೆ ತನ್ನ ಪತ್ನಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಿದ ಅಜರುದ್ದೀನ್ ಎಂಬಾತ, ಅಪಘಾತದಲ್ಲಿ ಹೆಂಡತಿ ಮಕ್ಕಳು ಸಾವು ಎಂದು ಬಿಂಬಿಸಲು ಮೃತದೇಹಗಳನ್ನು ಈಜುಕೊಳಕ್ಕೆ ಎಸೆದಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಜರುದ್ದೀನ್ ತನ್ನ ಪತ್ನಿ ಫರ್ಹತ್ ಳೊಂದಿಗೆ ಗಂಡು ಮಗುವಿನ ವಿಚಾರಕ್ಕಾಗಿ ಪದೇ ಪದೇ ಜಗಳವಾಡುತ್ತಿದ್ದ. ಇಬ್ಬರು ಹೆಣ್ಣು ಮಕ್ಕಳಿದ್ದರೂ ಸಹ, ಗಂಡು ಮಗು ಇಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದ. ಈ ವಿಕೃತ ಮನಸ್ಥಿತಿ ಕೊಲೆಯಲ್ಲಿ ಅಂತ್ಯವಾಗಿದೆ.
ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಂದ ನಂತರ, ಆರೋಪಿಯು ಯಾರೂ ಇಲ್ಲದ ಸಮಯದಲ್ಲಿ ಮೃತದೇಹಗಳನ್ನು ಹತ್ತಿರದ ಈಜುಕೊಳಕ್ಕೆ ಎಸೆದಿದ್ದ. ಆರಂಭದಲ್ಲಿ ಅವರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಮತ್ತು ಪೊಲೀಸರ ತನಿಖೆಯಿಂದ ವ್ಯವಸ್ಥಿತವಾಗಿ ನಡೆದ ಕೊಲೆ ಎಂಬುದು ಬಯಲಾಗಿದೆ.
ಇನ್ನು ಫರ್ಹತ್ ಪತಿ ಅಜರುದ್ದೀನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಅವರ ಪತ್ನಿ ಮತ್ತು ಪುತ್ರಿಯರುಕೊಳಕ್ಕೆ ಜಾರಿಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದಿದ್ದಾಅನೆ. ಆದರೆ ಪೊಲೀಸರಿಗೆ ಬಂದ ಅನುಮಾನದಿಂದ ಹಾಗೂ ಪತಿ ಅಜರುದ್ದೀನ್ ನೀಡಿರುವ ಹೇಳಿಕೆಯೂ ಈ ಪ್ರಕರಣಕ್ಕೆ ಹೊಂದಾಣಿಕೆ ಆಗುತ್ತಿರಲಿಲ್ಲ. ಇದೇ ವೇಳೆ ಫರ್ಹತ್ ತಂದೆ ನೀಡಿದ ದೂರು ಕೂಡ ಕೊಲೆ ಎಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.
ಕಳೆದ ಕೆಲವು ದಿನಗಳಿಂದ ತಮ್ಮ ಮಗಳು ಮತ್ತು ಅಳಿಯನ ನಡುವೆ ಗಂಡು ಮಗು ವಿಚಾರವಾಗಿ ಗಲಾಟೆಯಾಗುತ್ತಿತ್ತು. ಫರ್ಹತ್ ಗರ್ಭಧಾರಣೆಯ ಬಗ್ಗೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಆರೋಪಿಸಿ ಫರ್ಹತ್ ಅವರ ತಂದೆ ಅಲಿ ಪೊಲೀಸರಿಗೆ ದೂರು ನೀಡಿದ್ದರು. ಅಳಿಯನಿಗೆ ಮತ್ತೊಂದು ಹೆಣ್ಣು ಮಗು ಬೇಡವಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಫರ್ಹತ್ಗೆ ಒತ್ತಾಯಿಸುತ್ತಿದ್ದ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ತನಿಖೆ ವೇಳೆ ಅಜರುದ್ದೀನ್ ನೇ ಹೆಂಡತಿ ಹಾಗೂ ಇಬ್ಬರು ಹೆಣ್ನು ಮಕ್ಕಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

