ಮಹಾರಾಷ್ಟ್ರ ರಾಜಕಾರಣದ ಅತ್ಯಂತ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ (NCP) ಮುಖ್ಯಸ್ಥ ಅಜಿತ್ ಪವಾರ್ (66) ಅವರು ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.ಮೂರು ದಶಕಗಳ ರಾಜಕೀಯ ಪಯಣ ಹೊಂದಿದ್ದ ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದ ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಅಜಿತ್ ಪವಾರ್ ಅವರು ಮುಂಬೈನಿಂದ ಹೊರಟು ತಮ್ಮ ಕ್ಷೇತ್ರವಾದ ಬಾರಾಮತಿಗೆ ಸಾರ್ವಜನಿಕ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಪ್ರಯಾಣಿಸುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ VT-SSK ಲಿಯರ್‌ಜೆಟ್ 45 ವಿಮಾನವು ಬೆಳಿಗ್ಗೆ 8:45ರ ಸುಮಾರಿಗೆ ಬಾರಾಮತಿ ರನ್‌ವೇಯಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸುತ್ತಿದ್ದಾಗ ರನ್‌ವೇಯ ಹೊಸ್ತಿಲ ಬಳಿಯೇ ಅಪಘಾತಕ್ಕೀಡಾಯಿತು.ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಸಹಾಯಕ ಮತ್ತು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ
ಅಜಿತ್ ಪವಾರ್ ಅವರ ಒಟ್ಟು ಆಸ್ತಿ ಎಷ್ಟು?
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಜಿತ್ ಪವಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಅಜಿತ್ ಪವಾರ್ ಹಾಗೂ ಅವರ ಪತ್ನಿ ಸುನೇತ್ರಾ ಪವಾರ್ ಅವರ ಒಟ್ಟು ಆಸ್ತಿ ಮೌಲ್ಯ 124 ಕೋಟಿ ರೂ ಗೂ ಅಧಿಕವಾಗಿದೆ.
ಮಹಾರಾಷ್ಟ್ರ ರಾಜಕಾರಣದ ಪವರ್‌ಫುಲ್ ನಾಯಕ ಅಜಿತ್ ಪವಾರ್ ಅವರು ಕೇವಲ ಅಧಿಕಾರದಲ್ಲಿ ಮಾತ್ರವಲ್ಲದೆ ಆಸ್ತಿಪಾಸ್ತಿಯಲ್ಲೂ ದೈತ್ಯರಾಗಿದ್ದರು. 2024ರ ವಿಧಾನಸಭಾ ಚುನಾವಣೆಯ ಅಫಿಡವಿಟ್ ಪ್ರಕಾರ, ಅಜಿತ್ ಪವಾರ್ ಮತ್ತು ಅವರ ಪತ್ನಿ ಸುನೇತ್ರಾ ಪವಾರ್ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು ₹124.55 ಕೋಟಿ ಎಂದು ಅಂದಾಜಿಸಲಾಗಿದೆ.
ಅಜಿತ್ ಪವಾರ್ ಅವರ ವೈಯಕ್ತಿಕ ಆಸ್ತಿ ವಿವರ:
ಒಟ್ಟು ಆಸ್ತಿ: ಅಂದಾಜು ₹45.37 ಕೋಟಿ.
ಚರಾಸ್ತಿ (Movable Assets): ₹8.22 ಕೋಟಿ.
ಇದರಲ್ಲಿ ₹14.12 ಲಕ್ಷ ನಗದು ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ₹6.81 ಕೋಟಿ ಠೇವಣಿ ಸೇರಿದೆ.
ಬಾಂಡ್ ಮತ್ತು ಷೇರುಗಳಲ್ಲಿ ₹55 ಲಕ್ಷಕ್ಕೂ ಅಧಿಕ ಹೂಡಿಕೆ.
ವಾಹನಗಳು: ಟೊಯೋಟಾ ಕ್ಯಾಮ್ರಿ, ಹೋಂಡಾ ಸಿಆರ್‌ವಿ ಮತ್ತು ಒಂದು ಟ್ರ್ಯಾಕ್ಟರ್.
ಸ್ಥಿರಾಸ್ತಿ (Immovable Assets): ₹37.15 ಕೋಟಿ.
ಇದರಲ್ಲಿ ನಾಲ್ಕು ಐಷಾರಾಮಿ ಮನೆಗಳು ಕೃಷಿ ಭೂಮಿ ಮತ್ತು ವಾಣಿಜ್ಯ ಕಟ್ಟಡಗಳು ಸೇರಿವೆ.
ವಿಮೆ: ₹1 ಕೋಟಿಗೂ ಅಧಿಕ ಮೌಲ್ಯದ ಎಲ್‌ಐಸಿ (LIC) ಪಾಲಿಸಿ.
ಹೊಣೆಗಾರಿಕೆ (ಸಾಲ): ಸುಮಾರು ₹21.39 ಕೋಟಿ ಸಾಲವನ್ನೂ ಅವರು ಹೊಂದಿದ್ದರು.
ಸುನೇತ್ರಾ ಪವಾರ್ ಅವರ ಆಸ್ತಿ ವಿವರ (ಪತ್ನಿ):
ರಾಜ್ಯಸಭಾ ಸದಸ್ಯೆಯಾಗಿರುವ ಸುನೇತ್ರಾ ಪವಾರ್ ಅವರು ಪತಿಗಿಂತಲೂ ಹೆಚ್ಚಿನ ಸ್ಥಿರಾಸ್ತಿಯನ್ನು ಹೊಂದಿದ್ದಾರೆ:
ಚರಾಸ್ತಿ: ₹14.57 ಕೋಟಿ.
ಸ್ಥಿರಾಸ್ತಿ: ₹58.39 ಕೋಟಿ.
ವಿಮೆ: ₹44 ಲಕ್ಷಕ್ಕೂ ಅಧಿಕ ಮೌಲ್ಯದ ಎಲ್‌ಐಸಿ ಪಾಲಿಸಿ
ಪವಾರ್ ದಂಪತಿಯ ಒಡೆತನದಲ್ಲಿ ಸುಮಾರು ₹13.21 ಕೋಟಿ ಮೌಲ್ಯದ ಕೃಷಿ ಭೂಮಿ ಹಾಗೂ ₹37 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ಇದರ ಜೊತೆಗೆ ಅಂದಾಜು ₹11 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣಗಳು ಇವರ ಹೆಸರಿನಲ್ಲಿವೆ. ರಿಯಲ್ ಎಸ್ಟೇಟ್, ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಕೃಷಿ ಸಂಬಂಧಿತ ಉದ್ದಿಮೆಗಳಲ್ಲಿ ಈ ಕುಟುಂಬದ ಹೂಡಿಕೆ ಅಪಾರವಾಗಿದೆ

