ಬೆಂಗಳೂರು: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ರಾಜ್ಯದ ಪದವೀಧರರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಲ್ಲಿ (KSDA) ಖಾಲಿ ಇರುವ ಗ್ರೂಪ್-ಬಿ ವೃಂದದ ಕೃಷಿ ಅಧಿಕಾರಿ (Agricultural Officer) ಮತ್ತು ಸಹಾಯಕ ಕೃಷಿ ಅಧಿಕಾರಿ (Assistant Agricultural Officer) ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಒಟ್ಟು 945 ಹುದ್ದೆಗಳಿದ್ದು, ಬಿಎಸ್‌ಸಿ ಹಾಗೂ ಬಿ.ಟೆಕ್ ಪದವಿ ಪೂರೈಸಿದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 20 ಕೊನೆಯ ದಿನಾಂಕವಾಗಿದೆ.
ವೃಂದಾವಾರು ಹಾಗೂ ಹುದ್ದೆಗಳ ಕಂಪ್ಲೀಟ್ ವಿವರ:
ರಾಜ್ಯಾದ್ಯಂತ ಒಟ್ಟು ಹುದ್ದೆಗಳನ್ನು ಎರಡು ಪ್ರಮುಖ ವೃಂದಗಳಾಗಿ ವಿಂಗಡಿಸಲಾಗಿದೆ:
ಉಳಿಕೆ ಮೂಲ ವೃಂದ (RPC): 672 ಹುದ್ದೆಗಳು
ಕೃಷಿ ಅಧಿಕಾರಿ (AO) – 86
ಸಹಾಯಕ ಕೃಷಿ ಅಧಿಕಾರಿ (AAO) – 586
ಕಲ್ಯಾಣ ಕರ್ನಾಟಕ ವೃಂದ (KK): 273 ಹುದ್ದೆಗಳು
ಕೃಷಿ ಅಧಿಕಾರಿ (AO) – 42
ಸಹಾಯಕ ಕೃಷಿ ಅಧಿಕಾರಿ (AAO) – 231
ಯಾರಿಗೆ ಅರ್ಹತೆ ಇದೆ? (ವಿದ್ಯಾರ್ಹತೆ)
ಕೃಷಿ ಅಧಿಕಾರಿ ಹುದ್ದೆಗೆ: ಬಿಎಸ್‌ಸಿ (ಕೃಷಿ / ಕೃಷಿ ಮಾರುಕಟ್ಟೆ ಮತ್ತು ಸಹಕಾರ / ಕೃಷಿ ಮಾರಾಟ ಮತ್ತು ಸಹಕಾರ / ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ / ಕೃಷಿ ಜೈವಿಕ ತಂತ್ರಜ್ಞಾನ / ಜೈವಿಕ ತಂತ್ರಜ್ಞಾನ / ಅಗ್ರಿಕಲ್ಚರಲ್ ಎಂಜಿನಿಯನಿಯರಿಂಗ್) ಅಥವಾ ಬಿ.ಟೆಕ್ (ಅಗ್ರಿಕಲ್ಚರಲ್ ಎಂಜಿನಿಯರಿಂಗ್) ಪದವಿ ಹೊಂದಿರಬೇಕು.
ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ: ಬಿಎಸ್‌ಸಿ (ಕೃಷಿ), ಬಿಎಸ್‌ಸಿ (ಆನರ್ಸ್) ಕೃಷಿ, ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ / ಆಹಾರ ತಂತ್ರಜ್ಞಾನ), ಬಿಎಸ್‌ಸಿ (ಕೃಷಿ ಮಾರಾಟ ಮತ್ತು ಸಹಕಾರ / ಅಗ್ರಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್) ಮುಗಿಸಿರಬೇಕು.
ವಯೋಮಿತಿ ಮತ್ತು ಸಡಿಲಿಕೆ:
ಕನಿಷ್ಠ ವಯಸ್ಸು: 18 ವರ್ಷ | ಗರಿಷ್ಠ ವಯಸ್ಸು: 40 ವರ್ಷ.
ವಯೋಮಿತಿ ಸಡಿಲಿಕೆ: ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇರಲಿದೆ.
ಅರ್ಜಿ ಶುಲ್ಕದ ವಿವರ:
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳು (2A/2B/3A/3B): ₹750
SC / ST / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗದ ಅಭ್ಯರ್ಥಿಗಳು: ₹500
ವಿಶೇಷ ಚೇತನ (PWD) ಅಭ್ಯರ್ಥಿಗಳು: ₹250
ಆಯ್ಕೆ ವಿಧಾನ ಮತ್ತು ಬಂಪರ್ ಸಂಬಳ
ಅರ್ಹ ಅಭ್ಯರ್ಥಿಗಳನ್ನು ಕನ್ನಡ ಭಾಷೆ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ (Competitive Exam) ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹69,250 ರಿಂದ ಭರ್ಜರಿ ₹1,34,200 ವರೆಗೆ ಮಾಸಿಕ ವೇತನ ದೊರೆಯಲಿದೆ.
ಪ್ರಮುಖ ದಿನಾಂಕಗಳು (Important Dates):
ಅರ್ಜಿ ಸಲ್ಲಿಕೆ ಆರಂಭ: ಮೇ 30, 2026
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: ಜೂನ್ 20, 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜೂನ್ 22, 2026
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ನೇರವಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು:
RPC ಮತ್ತು KK ವೃಂದದ ಅಭ್ಯರ್ಥಿಗಳು ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ: KEA Recruitment Application Link
ಸಹಾಯವಾಣಿ: ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ದೂರವಾಣಿ ಸಂಖ್ಯೆ: 080-23460460 ಅನ್ನು ಸಂಪರ್ಕಿಸಬಹುದು.

