HomeIndia'ಅಗ್ನಿವೀರ' ರಾಗಲು ಬಯಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಬದಲಾಗಿದೆ ನೇಮಕಾತಿ ಪ್ರಕ್ರಿಯೆ

‘ಅಗ್ನಿವೀರ’ ರಾಗಲು ಬಯಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಬದಲಾಗಿದೆ ನೇಮಕಾತಿ ಪ್ರಕ್ರಿಯೆ

ಅಗ್ನಿವೀರರಾಗಲು ಬಯಸುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಅಭ್ಯರ್ಥಿಗಳು ಮೊದಲಿಗೆ ಆನ್ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ.

ಇದಾದ ನಂತರ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ಈ ಕುರಿತಂತೆ ಭಾರತೀಯ ಸೇನೆ ಇಂದು ಜಾಹೀರಾತು ಬಿಡುಗಡೆ ಮಾಡಿದೆ. ನೂತನ ನಿಯಮ ಈಗಾಗಲೇ ಆಯ್ಕೆಯಾಗಿರುವವರಿಗೆ ಹಾಗೂ ಮಾರ್ಚ್ ಮೊದಲ ವಾರ ಸೇನೆ ಸೇರಲಿರುವವರಿಗೆ ಅನ್ವಯವಾಗುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2023-24ರಲ್ಲಿ ಸೇನೆ ಸೇರಲು ಬಯಸಿರುವ 40,000 ಅಭ್ಯರ್ಥಿಗಳಿಗೆ ಹೊಸ ನಿಯಮ ಅನ್ವಯವಾಗಲಿದ್ದು, ಈ ಮೊದಲು ವೈದ್ಯಕೀಯ ಪರೀಕ್ಷೆ ನಡೆದ ನಂತರ ದೈಹಿಕ ಕ್ಷಮತೆ ಪರೀಕ್ಷೆ ನಡೆಸಲಾಗುತ್ತಿತ್ತು. ಇದಾದ ಬಳಿಕ ಅಂತಿಮವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕಾಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular