HomeKarnatakaBREAKING : ವಕೀಲೆ ಜೀವಾ ಆತ್ಮಹತ್ಯೆ ಕೇಸ್ : 'SIT' ಯಿಂದ DYSP ಕನಕಲಕ್ಷ್ಮೀ ಅರೆಸ್ಟ್.!

BREAKING : ವಕೀಲೆ ಜೀವಾ ಆತ್ಮಹತ್ಯೆ ಕೇಸ್ : ‘SIT’ ಯಿಂದ DYSP ಕನಕಲಕ್ಷ್ಮೀ ಅರೆಸ್ಟ್.!

ಬೆಂಗಳೂರು: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ ಪಿ ಕನಕಲಕ್ಷ್ಮೀ ಅರವನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ.

ವಕೀಲೆ, ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿರುವ ಎಸ್ ಐಟಿ ಅಧಿಕಾರಿಗಳು ಡಿವೈ ಎಸ್ ಪಿ ಕನಕಲಕ್ಷ್ಮೀ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಡಿವೈ ಎಸ್ ಪಿ ಕನಕಲಕ್ಷ್ಮಿ ನವೆಂಬರ್ 14 ಮತ್ತು 21, 2024 ರ ನಡುವೆ ಜೀವಾ ಅವರನ್ನು ವಿಚಾರಣೆಗೆ ಕರೆದರು, ಈ ಸಂದರ್ಭದಲ್ಲಿ ಅವರು ತೀವ್ರ ಕಿರುಕುಳ ನೀಡಿ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ನವೆಂಬರ್ 22 ರ ಬೆಳಿಗ್ಗೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ವಕೀಲೆ ಹಾಗೂ ಉದ್ಯಮಿ ಆಗಿದ್ದ ಜೀವಾ 13 ಪುಟಗಳ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular