HomeEntertainment'ಅಧಿಪತ್ರ' ಚಿತ್ರದ ಟೀಸರ್ ರಿಲೀಸ್

‘ಅಧಿಪತ್ರ’ ಚಿತ್ರದ ಟೀಸರ್ ರಿಲೀಸ್

ಚಯನ್ ಶೆಟ್ಟಿ ನಿರ್ದೇಶನದ ರೂಪೇಶ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ‘ಅಧಿಪತ್ರ’ ಚಿತ್ರದ ಟೀಸರ್ ಅನ್ನು ಇಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ.

ಈ ಚಿತ್ರವನ್ನು ಕೆ ಆರ್ ಸಿನಿ ಕಂಬೈನ್ಸ್ ಬ್ಯಾನರ್ ನಲ್ಲಿ ದಿವ್ಯ ನಾರಾಯಣ್, ಕುಲದೀಪ್ ರಾಘವ್, ಲಕ್ಷ್ಮಿ ಗೌಡ ನಿರ್ಮಾಣ ಮಾಡಿದ್ದು, ರೂಪೇಶ್ ಶೆಟ್ಟಿ ಮತ್ತು ಜಾನ್ವಿ ಪ್ರಮುಖ ಪಾತ್ರದಲ್ಲಿದ್ದಾರೆ. ರಘು ಪರಮೇಶ್ವರ್, ಎಂ ಕೆ ಮಠ, ದೀಪಕ್ ರೈ, ಅನಿಲ್ ಉಪ್ಪಾಲ್,ಪ್ರಶಾಂತ್ ನಟನಾ, ಕಾರ್ತಿಕ್ ಭಟ್, ಪ್ರಕಾಶ್ ತುಮ್ಮಿ ನಾಡು, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಚಯನ್ ಶೆಟ್ಟಿ ಸಂಭಾಷಣೆ,  ರಾಹುಲ್ ಶ್ರೀಕಾಂತ್ ಸಂಕಲನ,ಮತ್ತು ಶ್ರೀಕಾಂತ್ ಛಾಯಾಗ್ರಹಣವಿದೆ. ಶ್ರೀಹರಿ ಶ್ರೆಸ್ಟಿ ಸಂಗೀತ ಸಂಯೋಜನೆ ನೀಡಿದ್ದಾರೆ,

For Latest News Updates, Join Our Whatsapp Community🚩
RELATED ARTICLES

Most Popular