HomeIndiaBREAKING : ಜಿ-20 ಸದಸ್ಯ ರಾಷ್ಟ್ರಗಳ ಪಟ್ಟಿಗೆ 'ಆಫ್ರಿಕನ್​ ಒಕ್ಕೂಟ' ಸೇರ್ಪಡೆ : ಪ್ರಧಾನಿ...

BREAKING : ಜಿ-20 ಸದಸ್ಯ ರಾಷ್ಟ್ರಗಳ ಪಟ್ಟಿಗೆ ‘ಆಫ್ರಿಕನ್​ ಒಕ್ಕೂಟ’ ಸೇರ್ಪಡೆ : ಪ್ರಧಾನಿ ಮೋದಿ ಘೋಷಣೆ

ಜಿ20 ಸದಸ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟ ಸೇರ್ಪಡೆಯಾಗಿದೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

ಜಿ20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಜಿ20 ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದರು. ಆ ಮೂಲಕ ಜಿ20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್ ಒಕ್ಕೂಟ ಸೇರ್ಪಡೆಯಾದಂತಾಗಿದೆ.

ನವದೆಹಲಿಯಲ್ಲಿ ಆಯೋಜನೆಗೊಂಡಿರುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಹಲವು ದಿಗ್ಗಜ ನಾಯಕರು ಆಗಮಿಸಿದ್ದು, ಜಿ 20 ಯಲ್ಲಿ ವಿಶ್ವದ ದಿಗ್ಗಜ ನಾಯಕರ ಸಮಾಗಮ ಆಗಿದೆ. ನವದೆಹಲಿಯಲ್ಲಿ 2 ದಿನ ‘G20 ಶೃಂಗಸಭೆ’ ಆರಂಭವಾಗಿದ್ದು , ಭಾರತ್ ಮಂಟಪಕ್ಕೆ ಆಗಮಿಸಿದ ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ( Narendra Modi) ಸ್ವಾಗತ ಕೋರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular