HomeLive NewsBREAKING: ಭೀಕರ ಅಪಘಾತ: ಬೈಕ್-ಟ್ರಕ್ ನಡುವೆ ಡಿಕ್ಕಿ: 13 ವರ್ಷದ ಬಾಲಕ ಸ್ಥಳದಲ್ಲೇ ದುರ್ಮರಣ

BREAKING: ಭೀಕರ ಅಪಘಾತ: ಬೈಕ್-ಟ್ರಕ್ ನಡುವೆ ಡಿಕ್ಕಿ: 13 ವರ್ಷದ ಬಾಲಕ ಸ್ಥಳದಲ್ಲೇ ದುರ್ಮರಣ

ಬೆಳಗಾವಿ: ಭೀಕರ ಅಪಘಾತದಲ್ಲಿ 13 ವರ್ಷದ ಬಾಲಕ ಬಲಿಯಾಗಿರುವ ಘೋರ ಘಟನೆ ನಡೆದಿದೆ. ಬೈಕ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನ 13 ವರ್ಷದ ಮಗ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.‌

ಬೆಳಗಾವಿಯ ಖಾನಾಪುರ ತಾಲೂಕಿನ ಪಾಲಿ ಗ್ರಾಮದ ಪಾರೆಸ್ಟ್ ಚೆಕ್‌ಪೋಸ್ಟ್ ಬಳಿ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.

ಬೈಕ್ ನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಲಾಗಿದೆ.‌

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular