HomeEntertainmentತಾಯಂದಿರ ದಿನದಂದು 'ಕುಬುಸ' ಚಿತ್ರದಿಂದ ಬಂತು ತಾಯಿಯ ಕುರಿತ ಹಾಡು

ತಾಯಂದಿರ ದಿನದಂದು ‘ಕುಬುಸ’ ಚಿತ್ರದಿಂದ ಬಂತು ತಾಯಿಯ ಕುರಿತ ಹಾಡು

ಇಂದು ತಾಯಂದಿರ ದಿನಾಚರಣೆಯ ಪ್ರಯುಕ್ತ ‘ಕುಬುಸ’ ಚಿತ್ರತಂಡ ವಿಡಿಯೋ ಹಾಡೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ. ‘ಹಸಿವಿನ ಕೂಗು ಕೇಳದ ತಾಯಿ ಇರುವಳೇ’ ಎಂಬ ಈ ಹಾಡು ಪ್ರದೀಪ್ ಚಂದ್ರ ಅವರ ಧ್ವನಿಯಲ್ಲಿ ತುಂಬಾ ಸುಮಧುರವಾಗಿ ಮೂಡಿ ಬಂದಿದೆ. ಪ್ರದೀಪ್ ಅವರೇ ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ.

ಈ ಚಿತ್ರವನ್ನು ಶೋಭಾ ಸಿನೆಮಾಸ್ ಬ್ಯಾನರ್ ನಲ್ಲಿ ಶೋಭಾ ನಿರ್ಮಾಣ ಮಾಡಿದ್ದು, ನಟರಾಜ್ ಭಟ್, ಮಹಾಲಕ್ಷ್ಮಿ, ಮಂಜಮ್ಮ ಜೋಗತಿ, ಹನುಮಕ್ಕ, ಅನಿಕ ರಮ್ಯ, ಮಂಜು ಗೌಡ ಮತ್ತು ಹುಲಿಕಪ್ಪ ಕಟ್ಟಿಮನಿ ತಾರಾ ಬಳಗದಲ್ಲಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ರಘುರಾಮ್ ಚರಣ್ ಸಾಹಸ ನಿರ್ದೇಶನ, ಚೇತನ್ ಶರ್ಮ  ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular