HomeLatest NewsSHOCKING : ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಪಾಪಿ ತಂದೆ : 12 ಮಂದಿ...

SHOCKING : ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಪಾಪಿ ತಂದೆ : 12 ಮಂದಿ ಆರೋಪಿಗಳು ಅರೆಸ್ಟ್.!

ಚಿಕ್ಕಮಗಳೂರು/ಮಂಗಳೂರು : ಪಾಪಿ ತಂದೆಯೋರ್ವ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ್ದು, ಅಪ್ರಾಪ್ತ ಬಾಲಕಿ ಕಾಮುಕರ ಅಟ್ಟಹಾಸಕ್ಕೆ ಸಿಲುಕಿ ನರಕಯಾತನೆ ಅನುಭವಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.

ಏನಿದು ಘಟನೆ

ತಾಯಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತ ಬಾಲಕಿ ಅಜ್ಜಿ ಮನೆಯಲ್ಲಿ ಪಿಯುಸಿವರೆಗೂ ವ್ಯಾಸಂಗ ಮಾಡಿದ್ದಳು. ನಂತರ ಕಳೆದ ಡಿಸೆಂಬರ್ ನಲ್ಲಿ ಅಜ್ಜಿ ಮನೆಯಿಂದ ತನ್ನ ತಂದೆಯ ಜೊತೆಗೆ ತನ್ನ ಮನೆಗೆ ತೆರಳಿದ್ದಳು. ಮತ್ತೆ ಅಜ್ಜಿ ಕರೆದಳು ಎಂಬ ಕಾರಣಕ್ಕೆ ಅಜ್ಜಿ ಮನೆಗೆ ಬಾಲಕಿ ವಾಪಸ್ ಆಗಿದ್ದಾಳೆ. ಈ ವೇಳೆ ಅಜ್ಜಿ ಮನೆಗೆ ಬಂದಿದ್ದ ಭರತ್ ಶೆಟ್ಟಿ ಎಂಬಾತ ತಂದೆ-ಮಗಳ ಜೊತೆ ಸಲುಗೆ ಬೆಳೆಸಿ ನಮ್ಮ ಮನೆಗೂ ಬಂದು ಹೋಗಿ ಎಂದು ಹೇಳಿ ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ತಂದೆ –ಮಗಳಿಬ್ಬರು ಭರತ್ ಜೊತೆ ಮಂಗಳೂರಿಗೆ ತೆರಳಿದ್ದರು. ಹಣದಾಸೆಗೆ ಬಿದ್ದ ತಂದೆ ಮಗಳನ್ನ ದಿನಕ್ಕೆ 5 ಸಾವಿರದಂತೆ ವೇಶ್ಯಾವಾಟಿಕೆ ದಂಧೆಗೆ ದೂಡಿದ್ದನು. ಮಾರ್ಗಮಧ್ಯೆ ನಾನು ಮುಟ್ಟಾಗಿದ್ದೇನೆ ಎಂದು ಹೇಳಿದರೂ ಕಿಂಚಿತ್ತು ಕರುಣೆ ತೋರದ ತಂದೆ ಅಮಾನವೀಯವಾಗಿ ವರ್ತಿಸಿದ್ದಾನೆ. ನಂತರ ಅಪ್ರಾಪ್ತೆ ಬಳಿ ಭರತ್ ಹಾಗೂ ಆತನ 4-5 ಮಂದಿ ಸಹಚರರು ಬಂದು ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸುತ್ತಾರೆ. ಭರತ್ ಹೇಳಿದಂತೆ 3-4 ಮಂದಿ ಆಕೆಯನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಬಿಟ್ಟು ಬಿಡಿ ಎಂದು ಬಾಲಕಿ ಎಷ್ಟೇ ಕೇಳಿಕೊಂಡರೂ ಕರುಣೆ ತೋರದ ಕಾಮುಕರು ಬಾಲಕಿ ಮೇಲೆ ಎರಗಿ ಬೀಳುತ್ತಾರೆ.
ಸದ್ಯ ಅಪ್ತಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಭರತ್ ಶೆಟ್ಟಿ, ಬಾಲಕಿಯ ತಂದೆ, ಅಜ್ಜಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular