HomeLatest NewsSHOCKING : ದೇಶದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಚಲಿಸುವ ರೈಲಿನಲ್ಲಿ ವಿವಾಹಿತ ಮಹಿಳೆ ಮೇಲೆ...

SHOCKING : ದೇಶದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ : ಚಲಿಸುವ ರೈಲಿನಲ್ಲಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ.!

ವಿಶಾಖ ಎಕ್ಸ್‌ಪ್ರೆಸ್ ರೈಲಿನಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಕಾಮಾಂಧನೊಬ್ಬ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆಯನ್ನು ನಯವಂಚನೆಯ ಮಾತುಗಳಿಂದ ನಂಬಿಸಿ, ಎಸಿ ಕೂಪೆಗೆ (AC Coupe) ಕರೆದೊಯ್ದು ಈ ಘೋರ ಕೃತ್ಯ ಎಸಗಿದ್ದಾನೆ.

“ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಚಲಿಸುವ ರೈಲಿನಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದೆ. ವಿಶಾಖ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಜಾಗ ಕೊಡಿಸುವುದಾಗಿ ನಂಬಿಸಿದ ಕಾಮಾಂಧನೊಬ್ಬ, ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ.”

ಏನಿದು ಘಟನೆ..?

ಪಲ್ನಾಡು ಜಿಲ್ಲೆಯ ರೆಂಟಚಿಂತಲ ಮೂಲದ ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ರೈಲಿನಲ್ಲಿಯೇ ಅತ್ಯಾಚಾರ ಎಸಗಿರುವ ಘಟನೆ ಈಗ ಸಂಚಲನ ಮೂಡಿಸಿದೆ. ರೆಂಟಚಿಂತಲದ ದಂಪತಿ ಜೀವನೋಪಾಯಕ್ಕಾಗಿ ವಿಶಾಖಪಟ್ಟಣಕ್ಕೆ ತೆರಳಿದ್ದರು. ಅಲ್ಲಿ ಪತಿ ಆಟೋ ಓಡಿಸುತ್ತಾ ಕುಟುಂಬವನ್ನು ಸಾಕಿ ಸಲಹುತ್ತಿದ್ದರು. ಈ ನಡುವೆ, ರೆಂಟಚಿಂತಲ ಮಂಡಲದ ಜೆಟ್ಟಿಪಾಲೆಂನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ದಂಪತಿ ಭಾನುವಾರ ವಿಶಾಖ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಡೆದಿದ್ದೇನು?

ರೈಲು ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದಾಗ, ಎಸಿ ಬೋಗಿಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ರೈಲಿನಲ್ಲಿ ಜಾಗ ಖಾಲಿ ಇದೆ ಎಂದು ಹೇಳಿ ಮಹಿಳೆಯನ್ನು ನಂಬಿಸಿ ಕರೆದೊಯ್ದಿದ್ದಾನೆ. ಪತಿ ಎಸಿ ಬೋಗಿಯ ಶೌಚಾಲಯದ ಬಳಿ ಕುಳಿತಿದ್ದರೆ, ಪತ್ನಿ H1A ಬೋಗಿಯ ಕೂಪೆಯೊಳಗೆ ಹೋಗಿದ್ದಾಳೆ. ಕೂಡಲೇ ಆ ಅಪರಿಚಿತ ವ್ಯಕ್ತಿ ಬೋಗಿಯ ಬಾಗಿಲು ಹಾಕಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆ ಸಮಯದಲ್ಲಿ ಆರೋಪಿಯು ಮಹಿಳೆಯನ್ನು ಹೆದರಿಸಿದ್ದಾನೆಯೇ ಅಥವಾ ಇನ್ನೇನಾದರೂ ಸಂಭವಿಸಿದೆಯೇ ಎಂಬುದು ತಿಳಿದುಬಂದಿಲ್ಲ. ಆದರೆ, ನಡೆದ ವಿಷಯವನ್ನು ಮಹಿಳೆಯು ಪತಿಗೆ ಕೂಡಲೇ ತಿಳಿಸಿಲ್ಲ. ರೈಲು ನಡಿಕುಡಿ ನಿಲ್ದಾಣ ತಲುಪಿ ಅಲ್ಲಿಂದ ಕೆಳಗಿಳಿದ ನಂತರ ಆಕೆ ಪತಿಗೆ ಅಸಲಿ ವಿಷಯ ತಿಳಿಸಿದ್ದಾಳೆ. ತಕ್ಷಣವೇ ರೆಂಟಚಿಂತಲ ತಲುಪಿದ ಸಂತ್ರಸ್ತೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ‘ಶೂನ್ಯ ಎಫ್‌ಐಆರ್’ (Zero FIR) ದಾಖಲಿಸಿಕೊಂಡು, ಪ್ರಕರಣದ ಮಾಹಿತಿಯನ್ನು ವಿಜಯವಾಡ ರೈಲ್ವೆ ಪೊಲೀಸರಿಗೆ ರವಾನಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular