
ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಚಿರತೆ ಮತ್ತು ಸಿಂಹಿಣಿ ಜಗಳದಲ್ಲಿ ಗೆಲ್ಲುವವರು ಯಾರು ಎನ್ನುವುದು ಈ ವಿಡಿಯೋದ ಕುತೂಹಲ.
ಸಾಮಾನ್ಯವಾಗಿ ಸಿಂಹಗಳು ಬಲಿಷ್ಠವಾಗಿರುತ್ತವೆ. ಇವುಗಳ ಕೈಗೆ ಯಾವುದೇ ಪ್ರಾಣಿ ಸಿಕ್ಕರೂ ಅವುಗಳ ಕಥೆ ಮುಗಿದಂತೆಯೇ. ಅದೇ ರೀತಿ ಸಿಂಹ ಮತ್ತು ಚಿರತೆ ಕಾದಾಡುವ ವಿಡಿಯೋ ವೈರಲ್ ಆಗಿದೆ. ಚಿರತೆಯ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಟ್ವಿಸ್ಟ್ ಸಿಗುತ್ತದೆ. ಚಿರತೆ ಅಲ್ಲಿಯೇ ಇದ್ದ ಮರವನ್ನು ಸರಸರ ಏರಿ ಹೋದರೆ ಸಿಂಹ ಮಾತ್ರ ಮರ ಹತ್ತಲಾಗದೇ ಅಸಹಾಯಕವಾಗಿ ಕುಳಿತುಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ರಾಜನಾಗಿದ್ದರೂ ಕೆಲವು ಸಲ ಸೋಲು ಒಪ್ಪಿಕೊಳ್ಳಲೇಬೇಕಾಗುತ್ತದೆ ಎನ್ನುವುದು ಇದರ ಪಾಠ ಎಂದಿದ್ದಾರೆ ನೆಟ್ಟಿಗರು.
https://youtu.be/SECpV-xZSKQ

