ಬಳ್ಳಾರಿಯ : ಬಳ್ಳಾರಿಯ ಜೆ.ಎಸ್.ಡಬ್ಲ್ಯೂ ಟೌನ್ ಶಿಪ್ ನಲ್ಲಿ ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿ ಯೋಗಭ್ಯಾಸ ಮಾಡಿದರು.
ಸಿಎಂ ಸಿದ್ದರಾಮಯ್ಯ ಜೊತೆ ನಟಿ ಶ್ರೀಲೀಲಾ ಸೇರಿದಂತೆ ಮತ್ತಿತರರು ಕೂಡ ಯೋಗ ಪ್ರದರ್ಶನ ನೀಡಿದರು.
ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗಾಗಿ ಯೋಗ ಒಂದು ಪರಿಣಾಮಕಾರಿ ಸಾಧನ. ಇಂದು ಅಂತಾರಾಷ್ಟ್ರೀಯ ಯೋಗ ದಿನ. ಇಡೀ ಜಗತ್ತು ಭಾರತದ ಕೊಡುಗೆಯಾದ ಯೋಗದ ಮಹತ್ವವನ್ನು ಅರಿತು ಅನುಸರಿಸುತ್ತಿದೆ. ಭಾರತವು ಜಗತ್ತಿಗೆ ಪರಿಚಯಿಸಿದ ಅನನ್ಯ ಸಾಧನ ಯೋಗ. ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ ಸಾಧ್ಯ. ನಿತ್ಯ ಜೀವನಕ್ಕೆ ಬೇಕಿರುವ ಏಕಾಗ್ರತೆ, ಸಂಯಮ, ಒತ್ತಡ ನಿರ್ವಹಣೆಯ ಕೌಶಲ್ಯಗಳು ಯೋಗದಿಂದ ಲಭಿಸುತ್ತವೆ. ಯೋಗದ ಮೂಲಕ ರೋಗಮುಕ್ತವಾದ ನೆಮ್ಮದಿಯ ಬದುಕು ಕಂಡುಕೊಳ್ಳೋಣ ಎಂದರು.