ಇತ್ತೀಚೆಗಂತೂ ಆನ್ ಲೈನ್ ಹಾವಳಿ. ಮನೆಯಲ್ಲಿ ಕುಳಿತುಕೊಂಡು ಮೊಬೈಲ್ ಮೂಲಕ ಎಲ್ಲವನ್ನೂ ಆನ್ ಲೈನ್ ನಲ್ಲೇ ಆರ್ಡರ್ ಮಾಡುತ್ತೇವೆ. ಆನ್ ಲೈನ್ ನಲ್ಲಿ ಇತ್ತೀಚೆಗೆ ಹಲವು ಎಡವಟ್ಟುಗಳು ಆಗುತ್ತಿರುವುದನ್ನು ನಾವು ನೋಡಿರುತ್ತೇವೆ. ಆರ್ಡರ್ ಮಾಡುವುದು ಒಂದು , ಬರುವುದು ಇನ್ನೊಂದು. ಹೀಗೆ ಹಲವು ಎಡವಟ್ಟುಗಳು ಆಗುತ್ತದೆ. ಆದರೆ ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ದಂಪತಿಗಳು ಅಮೇಜಾನ್ ನಲ್ಲಿ ಎಕ್ಸ್ ಬಾಕ್ ಕಂಟ್ರೋಲರ್ ನ್ನು ಆರ್ಡರ್ ಮಾಡಿದ್ದು, ನಂತರ ಪಾರ್ಸೆಲ್ ಬಂದಾಗ ಬೆಚ್ಚಿ ಬಿದ್ದಿದ್ದಾರೆ. ಅಮೆಜಾನ್ ನ ಪಾರ್ಸೆಲ್ ನಲ್ಲಿ ಹಾವನ್ನು ನೋಡಿದ ನಂತರ ಬೆಂಗಳೂರಿನ ದಂಪತಿಗಳು ಆಘಾತಕ್ಕೊಳಗಾಗಿದ್ದಾರೆ. ವೀಡಿಯೊದಲ್ಲಿ ಕಾಣುವಂತೆ ನಾಗರಹಾವು ಪ್ಯಾಕೇಜಿಂಗ್ ಟೇಪ್ ಗೆ ಅಂಟಿಕೊಂಡಿದೆ. . ಅಮೆಜಾನ್ನಿಂದ ಬಂದ ಪ್ಯಾಕೇಜ್ನಲ್ಲಿ ಜೀವಂತ ಹಾವು ಬಂದಿದೆ. ಪ್ಯಾಕೇಜ್ ಅನ್ನು ನೇರವಾಗಿ ಡಿಲೆವರಿ ಪಾರ್ಟ್ನರ್ ನೀಡಿದ್ದಾರೆ.
ವಿಷಕಾರಿ ಹಾವು ಅಮೆಜಾನ್ ಪ್ರೈಮ್ ಎಂದು ಬರೆದಿರುವ ಕಪ್ಪು ಡಕ್ಟ್ ಟೇಪ್ ನಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು. ಟೇಪ್ ಗೆ ಸಿಕ್ಕಿಹಾಕಿಕೊಂಡ ಹಾವು ತೆವಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಪಾರ್ಸಲ್ನಲ್ಲಿ ಇರುವ ಹಾವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
“ಭಾಯ್ ನೆ ಅಮೆಜಾನ್ ಫಾರೆಸ್ಟ್ ಸೇ ಆರ್ಡರ್ ಕಾರ್ಡಿಯಾ ಹೋಗಾ (ಬ್ರೋ ಅದನ್ನು ಅಮೆಜಾನ್ ಕಾಡಿನಿಂದ ಆರ್ಡರ್ ಮಾಡಿರಬೇಕು)” ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.