ಮನೆಯನ್ನು ಬೆಳಗುವವಳು ಹೆಣ್ಣು. ಪ್ರತಿಯೊಂದು ಮನೆಯ ಲಕ್ಷ್ಮಿ ಹೆಣ್ಣು. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗ್ತಾ ಇವೆ. ಮದುವೆ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸದಿರುವುದು ಇದಕ್ಕೊಂದು ಕಾರಣವೆಂದು ಶಾಸ್ತ್ರ ಹೇಳುತ್ತದೆ. ಶಾಸ್ತ್ರಗಳ ಪ್ರಕಾರ ವಧು ಪ್ರವೇಶ ಮುಂದಿನ ಜೀವನದ ಮೇಲೆ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಕುಟುಂಬದ ಶ್ರೇಯಸ್ಸು, ಪ್ರೀತಿ ವೃದ್ಧಿಗೂ ವಧು ಗೃಹ ಪ್ರವೇಶಕ್ಕೂ ನಿಕಟ ಸಂಬಂಧವಿದೆ.
ಶಾಸ್ತ್ರಗಳ ಪ್ರಕಾರ ಒಳ್ಳೆಯ ಮುಹೂರ್ತ ನೋಡಿ ವಧು ಪ್ರವೇಶ ಮಾಡಬೇಕು. ವಿಶೇಷ ಮುಹೂರ್ತದಲ್ಲಿ ವಧು ಗೃಹ ಪ್ರವೇಶ ಮಾಡಿದ್ರೆ ದಾಂಪತ್ಯ ಜೀವನ ಸುಖವಾಗಿರುತ್ತದೆ. ಹಾಗೆ ಆರ್ಥಿಕ ವೃದ್ಧಿಯಾಗುತ್ತದೆ.
ಮುಹೂರ್ತದ ಬಗ್ಗೆ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಮದುವೆ ದಿನ ವಧು ಗೃಹ ಪ್ರವೇಶ ಮಾಡುವುದು ಬಹಳ ಒಳ್ಳೆಯದು.
ಮದುವೆಯಾಗಿ 16 ದಿನದೊಳಗೆ ವಧು ಗೃಹ ಪ್ರವೇಶ ಮಾಡುವುದಾದಲ್ಲಿ ಚಂದ್ರಬಲ, ಗುರು, ಶುಕ್ರರ ದೋಷದ ಬಗ್ಗೆ ವಿಚಾರ ಮಾಡುವ ಅಗತ್ಯವಿಲ್ಲ.
16 ದಿನಗಳ ನಂತ್ರ ಪ್ರತಿಯೊಂದು ದೋಷಗಳನ್ನು ಗಮನದಲ್ಲಿಟ್ಟುಕೊಂಡು ಒಳ್ಳೆ ಮುಹೂರ್ತ ನೋಡಿಯೆ ವಧು ಗೃಹ ಪ್ರವೇಶ ಮಾಡಬೇಕು.
16 ದಿನಗಳವರೆಗೆ ವಧು ಗೃಹ ಪ್ರವೇಶ ಮಾಡಿಲ್ಲವೆಂದಾದಲ್ಲಿ ನಂತ್ರ ಬೆಸ ಮಾಸದಲ್ಲಿ ವಧು ಪ್ರವೇಶ ಮಾಡದಂತೆ ನೋಡಿಕೊಳ್ಳಿ. ವರ್ಷಾಂತ್ಯದಲ್ಲೂ ವಧು ಗೃಹ ಪ್ರವೇಶ ಮಾಡುವುದು ಯೋಗ್ಯವಲ್ಲ.
ಗೃಹ ಪ್ರವೇಶ ಮಾಡುವ ಮೊದಲು ಪಂಡಿತರಿಂದ ಒಳ್ಳೆ ಮುಹೂರ್ತ ಪಡೆಯುವುದು ಒಳ್ಳೆಯದು. ಉತ್ತಮ ಮುಹೂರ್ತದಲ್ಲಿ ವಧು ಗೃಹ ಪ್ರವೇಶ ಮಾಡಿದಲ್ಲಿ ವಿಚ್ಛೇದನ ಅಥವಾ ಗಲಾಟೆಯಾಗುವುದಿಲ್ಲ.