ಬೆಂಗಳೂರು : ಸೆಲೆಬ್ರಿಟಿಗಳ ಬಳಿಕ ಶಾಲಾ ವಿದ್ಯಾರ್ಥಿನಿಯ ಖಾಸಗಿ ಡೀಪ್ ಫೇಕ್ ಫೋಟೋ ವೈರಲ್ ಆಗಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನ ಪ್ರತಿಷ್ಟಿತ ಶಾಲೆಯ ವಿದ್ಯಾರ್ಥಿನಿಯ ಡೀಪ್ ಫೇಕ್ ಫೋಟೋ ವೈರಲ್ ಆಗಿದ್ದು, 9 ನೇ ತರಗತಿ ವಿದ್ಯಾರ್ಥಿನಿಯ ಫೋಟೋವನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಲಾಗಿದೆ. ದುಷ್ಕರ್ಮಿಗಳ ಕೃತ್ಯಕ್ಕೆ ಪೋಷಕರು ಬೆಚ್ಚಿಬಿದ್ದಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿಯರ ಅಶ್ಲೀಲ ಡೀಪ್ ಫೇಕ್ ಫೋಟೋಗಳನ್ನು ಹರಿಬಿಡಲಾಗುತ್ತಿತ್ತು, ಇದೀಗ ಶಾಲಾ ವಿದ್ಯಾರ್ಥಿನಿಯರನ್ನೂ ಟಾರ್ಗೆಟ್ ಮಾಡಲಾಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.