ನವದೆಹಲಿ : ಗುಜರಾತ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಂತರ ಹಲವಾರು ಜನರು ಉಸಿರಾಟದ ತೊಂದರೆಯನ್ನು ಅನುಭವಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬನಸ್ಕಾಂತದ ಪಾಲನ್ಪುರದ ಮಲನ್ ದರ್ವಾಜಾ ಬಳಿಯ ಗುಜರಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ.ಈ ಪ್ರದೇಶದಲ್ಲಿ ಅನಿಲ ಹರಡಿದ್ದು, ಜನರಿಗೆ ಉಸಿರಾಡಲು ಕಷ್ಟಕರವಾಗಿದೆ ಎಂದು ಪಾಲನ್ಪುರ ಸಿವಿಲ್ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಸುಮಾರು 60-70 ಜನರನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರಲ್ಲಿ ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದರು ಮತ್ತು ವೆಂಟಿಲೇಟರ್ ನಲ್ಲಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
#WATCH | Banaskantha, Gujarat: Several people were admitted to hospital after a gas cylinder exploded in a scrap shop near the Malan Darwaja of Palanpur
"The gas also spread in the area and people faced difficulty in breathing. Around 60-70 people were brought to Palanpur Civil… pic.twitter.com/WxTuR1AZPd
— ANI (@ANI) May 23, 2024

