ಬೆಂಗಳೂರು : ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಎಲ್ಲೇ ಇದ್ರೂ ಶರಣಾಗು ಎಂದು ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ನಲ್ಲಿ ಬಹಿರಂಗ ಪತ್ರ ಹೊರಡಿಸಿರುವ ದೇವೇಗೌಡರು ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಎಲ್ಲೇ ಇದ್ರೂ ಪೊಲೀಸರಿಗೆ ಶರಣಾಗು. ಕಾನೂನು ಪ್ರಕ್ರಿಯೆಗೆ ಹಾಜರಾಗು..ಎಲ್ಲಿದ್ದರೂ ಸ್ವದೇಶಕ್ಕೆ ವಾಪಸ್ ಆಗಬೇಕು…ಈ ವಿಚಾರವನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತಿದ್ದೇನೆ.
ಎಲ್ಲವನ್ನು ತೀರ್ಮಾನಿಸಲು ಕಾನೂನು ಇದೆ. ನಾನಾಗಲಿ ನನ್ನ ಕುಟುಂಬವಾಗಲಿ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಬಾರದೇ ಇದ್ರೆ ಕುಟುಂಬದ ಕೋಪದ ಕಣ್ಣಿಗೆ ಗುರಿಯಾಗುತ್ತೀಯಾ..? ಕುಟುಂಬದ ಕಣ್ಣಿಗೆ ನೀನು ಏಕಾಂಗಿಯಾಗಿರಬೇಕಾದಿತು ಎಂದು ದೇವೇಗೌಡರು ಖಡಕ್ ಎಚ್ಚರಿಕೆ ನೀಡಿದ್ದಾರೆ.
I have issued a warning to @iPrajwalRevanna to return immediately from wherever he is and subject himself to the legal process. He should not test my patience any further. pic.twitter.com/kCMuNJOvAo
— H D Devegowda (@H_D_Devegowda) May 23, 2024

