ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಮತ್ತು ವಾಣಿಜ್ಯ ವಾಹನಗಳು ಮೊತ್ತವನ್ನು ಪಾವತಿಸುವುದನ್ನು ಕಡ್ಡಾಯಗೊಳಿಸಿದೆ.
ವಾಹನಗಳ ದಟ್ಟಣೆ ಹೆಚ್ಚಾಗಿ ಕಿರಿಕಿರಿ ಉಂಟಾಗುತ್ತಿರುವ ಹಿನ್ನೆಲೆ ಪಿಕ್ಅಪ್ ಲೇನ್ಗೆ ಪ್ರವೇಶಿಸುವ ವಾಣಿಜ್ಯ ವಾಹನಗಳು ಮೊದಲ 7 ನಿಮಿಷಗಳಿಗೆ ₹150 ಹಾಗೂ ನಂತರದ 7 ನಿಮಿಷಕ್ಕೆ ₹150 ಶುಲ್ಕ ನಿಗದಿ ಮಾಡಲಾಗಿದೆ. ಬಸ್ಗಳಿಗೆ ₹600 ಶುಲ್ಕ ನಿಗದಿ ಪಡಿಸಲಾಗಿದೆ.
ಸೋಮವಾರದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಪ್ರಯಾಣವು ದುಬಾರಿಯಾಗಲಿದೆ ಎಂದು ಸೂಚನೆ ನೀಡಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.
ಈ ವಾಹನಗಳು ಏಳು ನಿಮಿಷಗಳ ಮಿತಿಯನ್ನು ಮೀರಿದರೆ ಶುಲ್ಕವು 300 ರೂ.ಗೆ ಹೆಚ್ಚಾಗುತ್ತದೆ ಎಂದು ಅದು ಹೇಳಿದೆ.ಹೊಸ ಶುಲ್ಕ ರಚನೆಯು ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡಕ್ಕೂ ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು.
ಓಲಾ ಮತ್ತು ಉಬರ್ ನಂತಹ ಕ್ಯಾಬ್ ಅಗ್ರಿಗೇಟರ್ ಗಳು ನಿರ್ವಹಿಸುವ ವಾಹನಗಳು ಸೇರಿದಂತೆ ವಾಣಿಜ್ಯ ವಾಹನಗಳು ಏಳು ನಿಮಿಷಗಳವರೆಗೆ 150 ರೂ.ಗಳ ಪ್ರವೇಶ ಶುಲ್ಕವನ್ನು ಪಾವತಿಸುವುದನ್ನು ಅಧಿಸೂಚನೆಯಲ್ಲಿ ಕಡ್ಡಾಯಗೊಳಿಸಲಾಗಿದೆ.