alex Certify ‘PUC’ ನಂತರ ಮುಂದೇನು..? ವಿವಿಧ ಕೋರ್ಸ್ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘PUC’ ನಂತರ ಮುಂದೇನು..? ವಿವಿಧ ಕೋರ್ಸ್ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

ಬೆಂಗಳೂರು : ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಪಿಯುಸಿ ನಂತರ ಮುಂದೇನು..? ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಸಜಹವಾಗಿಯೇ ಇರುತ್ತದೆ.

ಈ ಲೇಖನದ ಮೂಲಕ ದ್ವಿತೀಯ ಪಿಯುಸಿ ನಂತರ ಮಾಡಬಹುದಾದ ವಿವಿಧ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

1) ಕಲಾ ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ

ಕಲಾ ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ ಈ ಕೋರ್ಸ್ಗಳನ್ನು ಮಾಡಬಹುದು. ಫ್ಯಾಶನ್ ಡಿಸೈನಿಂಗ್, ಹೋಟೆಲ್ ಮ್ಯಾನೇಜ್ಮೆಂಟ್, ಪ್ರಾಡಕ್ಟ್ ಡಿಸೈನ್, , ಡಿಪ್ರೆಶನ್ ಕೌನ್ಸೆಲಿಂಗ್, ಕಾನೂನು ಪದವಿ ಮಾಡಬಹುದು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತೆಗೆದುಕೊಂಡರೆ ರೇಡಿಯೋ, ಟಿವಿ, ದಿನಪತ್ರಿಕೆ, ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಡಿಸೈನಿಂಗ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಿರುವುದರಿಂದ ಫ್ಯಾಶನ್ ಡಿಸೈನಿಂಗ್ ಕೋರ್ಸ್ಗೆ ಹೆಚ್ಚಿನ ಬೇಡಿಕೆ ಇದೆ. ಇದರ ಜೊತೆ ನೀವು ಆಭರಣಗಳ ಡಿಸೈನಿಂಗ್ ಸಹ ಕಲಿಯಬಹುದಾಗಿದೆ. ಈ ಕೋರ್ಸ್ ಮುಗಿದ ಮೇಲೆ ಒಳ್ಳೆಯ ಉದ್ಯೋಗವಾಕಶಗಳು ಸಿಗುತ್ತವೆ. ಹಾಗೂ ನೀವು ಬ್ಯಾಚುಲರ್ ಆಫ್ ಲಾ ಕೂಡ ಮಾಡಬಹುದು. ನೀವು ಈ ಕೋರ್ಸ್ ಆಯ್ಕೆಮಾಡಿಕೊಳ್ಳುವವರಿದ್ದರೆ, ಎಲ್ಎಲ್ಬಿ ಪದವಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಡಿಯಲ್ಲಿ ಬರುವ ಸಂಸ್ಥೆಯಲ್ಲಿ ಮಾಡಬೇಕು.

2) ವಾಣಿಜ್ಯ ( ಕಾಮರ್ಸ್ ) ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ
ವಾಣಿಜ್ಯ ( ಕಾಮರ್ಸ್ ) ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ ಬಿ.ಕಾಂ, ಬಿಬಿಎಂ ಮಾಡಬಹುದು. ಈ ಕೋರ್ಸ್ ಮಾಡುವುದರಿಂದ ಬ್ಯಾಂಕ್ ಸೇರಿದಂತೆ ವಿವಿಧ ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಮಾಡಬಹುದು. ವಾಣಿಜ್ಯ ( ಕಾಮರ್ಸ್ ) ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ ಬಿಬಿಎ, ಬಿಕಾಂ, ಬಿಎ ಅರ್ಥಶಾಸ್ತ್ರ, ಎಂಬಿಎ ಮತ್ತು ಪಿಜಿಡಿಎಂ ಓದಿ ಸುಲಭವಾಗಿ ಉದ್ಯೋಗ ಪಡೆಯಬಹುದು. ಬಿ.ಕಾಂ ಮಾಡಿ ಎಂಬಿಎ ಮಾಡಿದರೆ ಉನ್ನತ ಕಂಪನಿ, ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಬಿ.ಕಾಂ ಮಾಡಿ (ಸಿಎ) ಚಾರ್ಟೆಟ್ ಅಕೌಂಟೆಂಟ್ ಪರೀಕ್ಷೆ ಪಾಸ್ ಮಾಡಿದರೆ ಹಲವು ಅವಕಾಶಗಳು ಸಿಗುತ್ತದೆ.

3) ವಿಜ್ಞಾನ ವಿಷಯದೊಂದಿಗೆ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದರೆ

ವಿಜ್ಞಾನ ವಿಷಯದೊಂದಿಗೆ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದರೆ ಎಂಬಿಬಿಎಸ್, ಆರ್ಕಿಟೆಕ್ಚರ್, ಏವಿಯೇಷನ್ನಲ್ಲಿ ಸೌಂಡ್ ಇಂಜಿನಿಯರಿಂಗ್ ಮಾಡಬಹುದು. ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್ ಮುಂತಾದ ಆಯ್ಕೆಗಳು ಸಿಗುತ್ತದೆ., ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್ ಮಾಡಬಹುದು.

 

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...