ಮಂಗಳೂರು : ಏ.14 ರಂದು ಮಂಗಳೂರಲ್ಲಿ ನಿಗದಿಯಾಗಿದ್ದ ಪ್ರಧಾನಿ ಮೋದಿ ಸಮಾವೇಶ ರದ್ದಾಗಿದ್ದು, ರೋಡ್ ಶೋ ಮಾತ್ರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಏ.14ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದರು. ಅಲ್ಲದೇ ಮೋದಿ ಸಮಾವೇಶಕ್ಕೆ ಬಿಜೆಪಿ ನಾಯಕರು ಮಂಗಳೂರಿನಲ್ಲಿ ಚಪ್ಪರ ಮುಹೂರ್ತ ಕೂಡ ಮಾಡಿದ್ದರು. ಆದರೆ ಕೊನೇ ಕ್ಷಣದಲ್ಲಿಪ್ರಧಾನಿ ಮೋದಿ ಸಮಾವೇಶ ರದ್ದು ಮಾಡಿ ರೋಡ್ ಶೋ ಮಾತ್ರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ, ಏಪ್ರಿಲ್ 15 ರಿಂದ 17 ರವರೆಗೆ ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಶಾಸಕರು ಮತ್ತು ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಪ್ರಮುಖ ನಾಯಕರು ಮನೆ ಮನೆ ಪ್ರಚಾರದ ಭಾಗವಾಗಿ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಜಿಲ್ಲೆಗಳಲ್ಲಿ ಇದು ನಡೆಯಲಿದೆ. ಏಪ್ರಿಲ್ 10 ಮತ್ತು 11 ರಂದು ರಾಜ್ಯಾದ್ಯಂತ 58,000 ಬೂತ್ ಗಳಲ್ಲಿ ಬೂತ್ ಮಟ್ಟದ ಮಹಾ ಪ್ರಚಾರ ಅಭಿಯಾನ ನಡೆಯಲಿದೆ. ಚುನಾವಣಾ ಪ್ರಚಾರವು ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ ಮತ್ತು ವಿಕಾಸಿತ ಭಾರತವನ್ನು ಕೇಂದ್ರೀಕರಿಸುತ್ತದೆ.