ಬೆಂಗಳೂರು : ಶೋಭಾ ಕರಂದ್ಲಾಜೆ ರ್ಯಾಲಿ ವೇಳೆ ಅಪಘಾತ ನಡೆದಿದ್ದು, ಓರ್ವ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕಣಕ್ಕಿಳಿದಿದ್ದು, ಅವರು ಇಂದು ಕ್ಷೇತ್ರದಲ್ಲಿ ರ್ಯಾಲಿ ನಡೆಸುವಾಗ ಅಪಘಾತ ಸಂಭವಿಸಿದೆ. ಕೆ ಆರ್ ಪುರದ ಗಣೇಶ ದೇಗುಲದ ಬಳಿ ಈ ಘಟನೆ ನಡೆದಿದೆ.
ಕೆ ಆರ್ ಪುರದ ಟಿ.ಸಿ ಪಾಳ್ಯದ ಪ್ರಕಾಶ್ (65) ಶೋಭಾ ಕರಂದ್ಲಾಜೆ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಪ್ರಚಾರದ ವೇಳೆ ಕಾರಿಗೆ ಸ್ಕೂಟಿ ಡಿಕ್ಕಿಯಾಗಿ ಪ್ರಕಾಶ್ (65) ಎಂಬುವವರು ಮೃತಪಟ್ಟಿದ್ದಾರೆ. ಕಾರು ಡೋರ್ ಗೆ ಡಿಕ್ಕಿ ಹೊಡೆದು ಅವರು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಕೆ ಆರ್ ಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.