ಉಡುಪಿ : ಉಡುಪಿಯಲ್ಲಿ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕನನ್ನು ಬಂಧಿಸಲಾಗಿದೆ.
ಬಂಧಿತ ಶಿಕ್ಷಕನನ್ನು ಕಾರ್ಕಳ ಬೋಳ ವಂಜಾರಕಟ್ಟೆ ನಿವಾಸಿ ರಾಜೇಂದ್ರ ಆಚಾರ್ (58) ಎಂದು ಗುರುತಿಸಲಾಗಿದೆ. ರಾಜೇಂದ್ರ ಆಚಾರ್ ಈ ಹಿಂದೆ ಹಲವು ಬಾರಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು.
ಶಾಲಾ ವಿದ್ಯಾರ್ಥಿನಿಯರು ನೀಡಿದ ದೂರಿನ ಮೇರೆಗೆ ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.