ಕಾರವಾಡ : ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗ್ಬೇಕೆಂದು ವ್ಯಕ್ತಿಯೋರ್ವ ಕೈ ಬೆರಳು ಕತ್ತರಿಸಿಕೊಂಡ ಘಟನೆ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.
ಅರುಣ್ ವರ್ಣೇಕರ್ ಎಂಬಾತ ತನ್ನ ಎಡಗೈ ಕೈ ಬೆರಳನ್ನು ಕತ್ತರಿಸಿಕೊಂಡು ಕಾಳಿದೇವಿಗೆ ಅರ್ಪಿಸಿದ್ದಾರೆ. ಪ್ರಧಾನಿ ಮೋದಿಗಾಗಿ ಗುಡಿಕಟ್ಟಿ ಪೂಜೆ ಮಾಡುತ್ತಿರುವ ಅರುಣ್ ಅಪ್ಪಟ ಪ್ರಧಾನಿ ಮೋದಿಯ ಭಕ್ತನಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲೆಂದು ತನ್ನ ಕೈ ಬೆರಳನ್ನು ಕತ್ತರಿಸಿಕೊಂಡು ಕಾಳಿದೇವಿಗೆ ಅರ್ಪಿಸಿದ್ದಾರೆ . ಹಾಗೂ ಗೋಡೆ ಮೇಲೆ ‘ಪ್ರಧಾನಿ ಮೋದಿ ಮತ್ತೆ ಪ್ರಧಾನಿ ಆಗಲಿ’ ಎಂದು ರಕ್ತದಲ್ಲಿ ಬರೆದಿದ್ದಾರೆ.