ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಗೂಳಿಯೊಂದು ಬೈಕ್ ಸವಾರನಿಗೆ ಗುಮ್ಮಿದ್ದು, ಬೈಕ್ ಸವಾರ ಲಾರಿಯಡಿ ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಸ್ಕೂಟಿ ಸವಾರಿ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಇದ್ದಕ್ಕಿದ್ದಂತೆ ಕೋಲೆ ಬಸವ ದಾಳಿ ನಡೆಸಿತು. ಮಹಿಳೆಯೊಬ್ಬಳು ಕೋಲೆ ಬಸವನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಂಪು ಸ್ಕೂಟಿಯಲ್ಲಿ ವ್ಯಕ್ತಿ ವಿರುದ್ಧ ದಿಕ್ಕಿನಲ್ಲಿ ಬಂದನು. ಇದ್ದಕ್ಕಿದ್ದಂತೆ, ಆ ವ್ಯಕ್ತಿಗೆ ಗೂಳಿ ಗುಮ್ಮಿದ್ದು, ಆತ ಲಾರಿಯಡಿ ಬಿದ್ದಿದ್ದಾನೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.