alex Certify ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬೇಸಿಗೆ ರಜೆಯಲ್ಲೂ ಬಿಸಿಯೂಟ ವಿತರಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬೇಸಿಗೆ ರಜೆಯಲ್ಲೂ ಬಿಸಿಯೂಟ ವಿತರಣೆ..!

ಬೆಂಗಳೂರು : ರಾಜ್ಯದ 1-10ನೇ ತರಗತಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೇಸಿಗೆ ರಜೆಯಲ್ಲಿ ಬಿಸಿಯೂಟ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಬರ ಪೀಡಿತ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮವನ್ನು ಸರ್ಕಾರಿ ಮತ್ತು ಅನುದಾನಿತ 1-10ನೇ ತರಗತಿಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜಾ ಅವಧಿಯಲ್ಲಿ ಅನುಷ್ಠಾನಗೊಳಿಸಲು ಮಾರ್ಗಸೂಚಿ ನೀಡುವ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

2023-24 ನೇ ಸಾಲಿನ ಉಲ್ಲೇಖ-1ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಡವಳಿಯಂತೆ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬರ ಪೀಡಿತ 31 ಕಂದಾಯ ಜಿಲ್ಲೆಗಳಲ್ಲಿ ಒಟ್ಟು 236 ರ ಪೈಕಿ 223 ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿ ಸರ್ಕಾರವು ಆದೇಶಿಸಿದೆ.

ಸರ್ವೋಚ್ಚ ನ್ಯಾಯಾಲಯುವ ಆದೇಶಾನುಸಾರ ಬರಗಾಲ ಪೀಡಿತ ಪ್ರದೇಶದಲ್ಲಿ ಬೇಸಿಗೆ ರಜೆಯಲ್ಲಿಯೂ ಸಹ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-10 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟವನ್ನು ನೀಡಬೇಕಾಗಿರುತ್ತದೆ. ಪ್ರಸ್ತುತ 2024-25ನೇ ಸಾಲಿನಬೇಸಿಗೆ ರಜೆಯ ಅವಧಿಯು ದಿನಾಂಕ 11.04.2024 ರಿಂದ ದಿನಾಂಕ 28.05.2024 ರವರೆಗೆ ಒಟ್ಟು 41 ದಿನಗಳ ಅವಧಿಯಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಕೈಗೊಳ್ಳಬೇಕಾಗಿದೆ. ಈ ಸಂಬಂಧ ದಿನಾಂಕ 10.01.2024 ರಂದು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ, ಇವರ ಅಧ್ಯಕ್ಷತೆಯಲ್ಲಿ 2024-25ರಲ್ಲಿ ನಡೆದ ಎಸ್ ಎಸ್ ಎಂ ಸಿ ಸಭೆಯಲ್ಲಿ ಪಿ.ಎಂ. ಪೋಷಣ್ ಮಧ್ಯಾಹ್ನ, ಉಪಾಹಾರ ಯೋಜನೆಯನ್ನು 1-10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅನುಷ್ಠಾನಕ್ಕಾಗಿ ಸಿದ್ಧಪಡಿಸಿದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ ಬಗ್ಗೆ ಸಭೆಯ ಸಹಮತ ನಿರ್ಣಯದಂತೆ ಮತ್ತು ದಿನಾಂಕ: 27.03.2024 ರಂದು ಶಿಕ್ಷಣ ಮಂತ್ರಾಲಯ ನವದೆಹಲಿ ಇಲ್ಲಿ ನಡೆದ ಪಿ.ಎ.ಬಿ ಸಭೆಯಲ್ಲಿ ಅನುಮೋದನೆ ಆಗಿರುವಂತೆ ಈ ಕೆಳಕಂಡ ಕ್ರಮಗಳನ್ನು ಮತ್ತು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಮೂಲಕ ಸೂಚಿಸಿದೆ..

ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ ವಿತರಣೆಗೆ ಅಡುಗೆ ಕೇಂದ್ರಗಳನ್ನು ಗುರುತಿಸುವ ಬಗ್ಗೆ
1.1 ಪ್ರಸ್ತುತ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದ್ದು ಬೇಸಿಗೆ ರಜಾ ಅವಧಿಯಲ್ಲಿ ಈ ಕಾರ್ಯಕ್ರಮವನ್ನು 41 ದಿನಗಳ ಅವಧಿಗೆ ಏಪ್ರಿಲ್ ಮೇ 2024ರ ಮಾಹೆಗಳಲ್ಲಿ ಅನುಷ್ಠಾನಗೊಳಿಸುವುದು. ಯಾವುದೇ ಒಂದು ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ ಅಂತಹ ಶಾಲೆಗಳ ಪೈಕಿ ಹೆಚ್ಚು ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಯನ್ನು ಗುರುತಿಸುವುದು. 1.2 ಕೇಂದ್ರ ಶಾಲೆಯನ್ನು ಗುರುತಿಸುವಾಗ ಮಕ್ಕಳ ಹಿತದೃಷ್ಟಿಯನ್ನು ಮಾತ್ರ ಪರಿಗಣಿಸಿ ಕ್ರಮ ವಹಿಸುವುದು.

ಜೊತೆಗೆ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮಕ್ಕೆ ಶಾಲೆಗಳ ಪಟ್ಟಿಯನ್ನು ಡೈಸ್ ಮಾಹಿತಿಆಧಾರದ ಮೇಲೆ ಗುರುತಿಸಿ ಅಂತಿಮಗೊಳಿಸಿಕೊಳ್ಳತಕ್ಕದ್ದು. ಈ ಸಂಬಂಧ ಆಯಾ ಶಾಲಾ ತಾಲ್ಲೂಕುಕ್ಷೇತ್ರಶಿಕ್ಷಣಾಧಿಕಾರಿಗಳು ಮ್ಯಾಪಿಂಗ್ ಕಾರ್ಯವನ್ನು ಸಿ ಆರ್ ಪಿ / ಇ ಸಿ ಒ ಇವರ ಸಹಕಾರದೊಂದಿಗೆದಿನಾಂಕ : 06.04.2024ರ ಒಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

ನಂತರದಲ್ಲಿ ಉಪನಿರ್ದೇಶಕರು ( ಆಡಳಿತ) ರವರು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ ಜಿಲ್ಲಾವಾರು ಶಾಲೆಗಳ ಪಟ್ಟಿಯನ್ನು ವೆಬ್ಸೈಟ್ ನಲ್ಲಿ ದೊರೆಯುವಂತೆ ಕ್ರಮವಹಿಸಬೇಕಾಗಿರುವುದರಿಂದ ದಿನಾಂಕ : 08.04.2024ರ ಒಳಗೆ ನಿರ್ದೇಶಕರು ಪಿ ಎಂ ಪೋಷಣ್, ರವರ ರಾಜ್ಯ ಕಛೇರಿಗೆ ಧೃಢೀಕರಿಸಿದ ಪ್ರತಿಯನ್ನು ಇ-ಮೇಲ್ ಮೂಲಕ ಸಲ್ಲಿಸತಕ್ಕದ್ದು, ಕೇಂದ್ರ ಶಾಲೆಗಳ ಪಟ್ಟಿಯನ್ನು ಉಪನಿರ್ದೇಶಕರ ಅನುಮೋದನೆಯೊಂದಿಗೆ ಆಯಾ ತಾಲ್ಲೂಕಿನ ಕೇಂದ್ರ ಶಾಲೆಗಳಲ್ಲಿ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್/ಪುರಸಭೆಗಳ ಕಛೇರಿಗಳಲ್ಲಿ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು/ಬಿ ಆರ್ ಸಿ ಕಛೇರಿಗಳಲ್ಲಿ ಹಾಗೂ ತಾಲ್ಲೂಕು ಪಂಚಾಯತ್ ಕಛೇರಿಯ ಸೂಚನ ಫಲಕದಲ್ಲಿ ಸಾರ್ವಜನಿಕ ಮಾಹಿತಿಗಾಗಿ ದಿನಾಂಕ : 08.04.2024 ರೊಳಗೆ ಪ್ರಕಟಪಡಿಸಿ ಮಕ್ಕಳಿಗೆ, ಪೋಷಕರಿಗೆ ಅರಿವು ಮೂಡಿಸುವುದು.

ಕೇಂದ್ರ ಶಾಲೆ ಮತ್ತು ಕೇಂದ್ರ ಶಾಲೆಗೆ ಸಂಯೋಜನೆಗೊಂಡಿರುವ ಸುತ್ತಮುತ್ತಲಿನ ಶಾಲೆಗಳ, ಈ ಶಾಲೆಗಳಿಂದ ಬಿಸಿಯೂಟ ಸ್ವೀಕರಿಸಲು ಒಪ್ಪಿಗೆ ನೀಡಿರುವ ಶಾಲಾ ಮಕ್ಕಳ ಸಂಖ್ಯೆ ವಿವರವನ್ನು ಕೇಂದ್ರ ಶಾಲೆಯಲ್ಲಿ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು/ ತಾಲ್ಲೂಕು ಪಂಚಾಯತ್ ಕಛೇರಿಗಳ ಸೂಚನಾ ಫಲಕದಲ್ಲಿ ಸಾರ್ವಜನಿಕರ, ಪೋಷಕರ ಮಾಹಿತಿಗಾಗಿ ಪ್ರಕಟಪಡಿಸುವ ಕ್ರಮವಹಿಸುವುದು. ( ನಮೂನೆ -1 ಮತ್ತು ನಮೂನೆ-2 ನ್ನು ಲಗತ್ತಿಸಿದೆ.)
1.5 ಗುರುತಿಸಿದ ಕೇಂದ್ರ ಶಾಲೆಗಳ ಮುಖ್ಯ ಶಿಕ್ಷಕರು ನೆರೆಹೊರೆಯ ಶಾಲೆಗಳ ಮುಖ್ಯ ಶಿಕ್ಷಕರಿಂದ ಮಕ್ಕಳ ಪಟ್ಟಿಯನ್ನು ಪಡೆದು ಧೃಢೀಕರಿಸಿ ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ನೀಡತಕ್ಕದ್ದು ಸದರಿ ಮುಖ್ಯ ಶಿಕ್ಷಕರು ಮಕ್ಕಳ ಪಟ್ಟಿಯಂತೆ ಒಟ್ಟು ಮಕ್ಕಳ ಹಾಜರಾತಿ ಆಧಾರದ ಮೇಲೆ ಬಿಸಿಯೂಟ ಕಾರ್ಯಕ್ರಮವನ್ನು ನಿರ್ವಹಿಸಲು ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳತಕ್ಕದ್ದು.

ಇನ್ನುಳಿದ ಶಾಲಾ ಮಕ್ಕಳನ್ನು ಸದರಿ ಕೇಂದ್ರ ಶಾಲೆಗೆ ಕಳುಹಿಸುವ ಕಾರ್ಯವನ್ನು ಮತ್ತು ಪ್ರತಿನಿತ್ಯ ಗುರುತಿಸುವ ಕಾರ್ಯವನ್ನು ಆಯಾ ಶಾಲೆಯ ಮುಖ್ಯಶಿಕ್ಷಕರು ಕ್ರಮವಹಿಸಬೇಕಾಗುತ್ತದೆ. ಗುರುತಿಸಲ್ಪಟ್ಟ ಕೇಂದ್ರ ಶಾಲೆಯ ಮುಖ್ಯ ಶಿಕ್ಷಕರು ಹಾಜರಾದ ಮಕ್ಕಳ ಬಿಸಿಯೂಟದ ದೈನಂದಿನ ವೆಚ್ಚವನ್ನು ಕೇಂದ್ರ ಶಾಲೆಯಲ್ಲಿಯೇ ಭರಿಸಿವುದು. ಇದರ ಲೆಕ್ಕ ವಿವರವನ್ನು ಬೇಸಿಗೆ ರಜೆಯ ಬಿಸಿಯೂಟ ಖರ್ಚು-ವೆಚ್ಚದ ಲೆಕ್ಕ ದಾಖಲೆಯನ್ನು ಇದರೊಂದಿಗೆ ಶಾಲಾ ಮಕ್ಕಳಹಾಜರಾತಿ, ಅಡುಗೆ ಸಿಬ್ಬಂದಿಗಳ ಹಾಜರಾತಿ, ಆಹಾರ ದಾಸ್ತಾನು ವಹಿ, ಶುಚಿ-ರುಚಿ ವಹಿ ಇತ್ಯಾದಿ ದಾಖಲೆಗಳನ್ನು ಕೇಂದ್ರ ಶಾಲೆಯಲ್ಲಿ ಪ್ರತ್ಯೇಕವಾಗಿ ನಿರ್ವಹಿಸುವುದು.

ಬೇಸಿಗೆ ರಜಾ ಅವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಪಡೆಯುವ ಮಕ್ಕಳ ಕುರಿತು ಮಾಹಿತಿ:

ಬೇಸಿಗೆ ರಜಾ ಅವಧಿಯಲ್ಲಿ ಎಲ್ಲಾ ಅರ್ಹ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ವಿತರಿಸುವ ಅವಕಾಶವಿದೆ.ಅವರಿಗೆ ಸಿದ್ಧಪಡಿಸಿದ ಆಹಾರವು ವ್ಯರ್ಥವಾಗದಂತೆ ಕ್ರಮವಹಿಸಲು ತಿಳಿಸಿದೆ.
2.2 ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟಿ ವ್ಯವಸ್ಥೆ ಕುರಿತು ಶಾಲಾ ಹಂತದಲ್ಲಿ ಪೋಷಕರ ಗಮನಕ್ಕೆ ತಂದು ಬಿಸಿಯೂಟ ಸ್ವೀಕರಿಸುವ ಕುರಿತು ಒಪ್ಪಿಗೆ ಪತ್ರವನ್ನು ಪಡೆಯುವುದು ಹಾಗೂ ಅದರಂತೆ ಕ್ರೋಢೀಕೃತ ಪಟ್ಟಿಯನ್ನು ಕೇಂದ್ರ ಶಾಲೆಗೆ ಒದಗಿಸುವುದು. ಈ ಕುರಿತು ನಿಗದಿತ ನಮೂನೆಯನ್ನು ಈ ಸುತ್ತೋಲೆಯ ಕೊನೆಯ ಪುಟದಲ್ಲಿ ಲಗತ್ತಿಸಿದೆ.

ಮೇಲ್ಕಂಡ ಬಿಸಿಯೂಟ ವ್ಯವಸ್ಥೆಯ ನಿರ್ವಹಣೆಯನ್ನು ಮಾಡಲು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ್ ಪಿ ಎಂ ಪೋಷಣ್ ಸಹಾಯಕ ನಿರ್ದೇಶಕರು ಸಿ ಆರ್ ಪಿ / ಬಿ ಆರ್ ಪಿ/ ಇ ಸಿ ಒ ಗಳನ್ನು ಕ್ಲಸ್ಟರ್‌ಾರು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸುವುದು.

ಬೇಸಿಗೆ ರಜಾ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಕರ್ತವ್ಯ ನಿರ್ವಹಿಸುವ ಶಿಕ್ಷಕರ ಗುರುತಿಸುವಿಕೆ.
ಮಧ್ಯಾಹ್ನ ಬಿಸಿಯೂಟಕ್ಕಾಗಿ ಗುರುತಿಸಲ್ಪಟ್ಟ ಅಡುಗೆ ಕೇಂದ್ರಗಳಲ್ಲಿ (ಹಿ.ಪ್ರಾ.ಶಾ/ ಉನ್ನತೀಕರಿಸಿದ ಹಿ.ಪ್ರಾ.ಶಾ/ ಪ್ರೌ.ಶಾ) ಕಾರ್ಯಕ್ರಮದ ನಿರ್ವಹಣೆಗಾಗಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಯಾ ಕೇಂದ್ರ ಶಾಲೆಯ ಮುಖ್ಯಶಿಕ್ಷಕರು ಹಾಗೂ ಅಗತ್ಯವಿದ್ದಲ್ಲಿ ಒಬ್ಬ ನೋಡಲ್ ಶಿಕ್ಷಕರನ್ನು ಗುರುತಿಸಿ ನಿಯೋಜಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮವಹಿಸುವುದು.

ಒಂದು ವೇಳೆ ಗುರುತಿಸ್ಪಟ್ಟ ಕೇಂದ್ರ ಶಾಲೆಯಲ್ಲಿ 250 ಕ್ಕಿಂತ ಹೆಚ್ಚು ಮಕ್ಕಳು ನಿರಂತರವಾಗಿ ಬಿಸಿಯೂಟ ಸ್ವೀಕರಿಸಲು ಹಾಜರಾಗುತ್ತಿದ್ದಲ್ಲಿ ಅಂತಹ ಕೇಂದ್ರ ಶಾಲೆಗಳಿಗೆ ಮಾತ್ರ ಒಬ್ಬರು ಹೆಚ್ಚುವರಿ ಶಿಕ್ಷಕರನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ನಿಯೋಜಿಸತಕ್ಕದ್ದು ಇದರೊಂದಿಗೆ ತಮ್ಮ ಕಛೇರಿಯಿಂದ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಯನ್ನು ತಾಲ್ಲೂಕು ನೋಡಲ್ ಅಧಿಕಾರಿಯಾಗಿ ಮೇಲ್ವಿಚಾರಣೆಗಾಗಿ ಪ್ರತಿನಿತ್ಯ ಕನಿಷ್ಠ ಎರಡು ಬಿಸಿಯೂಟ ಕೇಂದ್ರ ಶಾಲೆಗಳನ್ನು ಭೇಟಿ ಮಾಡಿ ಹಾಜರಾಗುವ ಅರ್ಹ ಮಕ್ಕಳ ಹಾಜರಾತಿ ಸಂಖ್ಯೆ ಸ್ವಚ್ಛತೆ, ಆಹಾರ ಗುಣಮಟ್ಟ, ಶುಚಿ-ರುಚಿ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ, ಪರಿಶೀಲಿಸಿ, ಪ್ರತಿ ನಿತ್ಯ ವರದಿಯನ್ನು ನೀಡುವುದು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...