ಬೆಂಗಳೂರು : ಪ್ರಧಾನಿ ಮೋದಿ ಅವರ ನಾಯಕತ್ವ ಗುಣ ಮೆಚ್ಚಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದು ಸಂಸದೆ ಸುಮಲತಾ ಹೇಳಿದರು.
ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಂಸದೆ ಸುಮಲತಾ ಇವತ್ತಿನ ದಿನ ನನ್ನ ರಾಜಕೀಯ ಜೀವನದಲ್ಲಿ ಮಹತ್ವ ಪಡೆದುಕೊಂಡ ಸುದಿನ. ಐದು ವರ್ಷಗಳ ಹಿಂದೆ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆ ಎಂದೆಂದೂ ಮರೆಯಲ್ಲ ಎಂದರು. ಈ ಐದು ವರ್ಷಗಳ ಪ್ರಯಾಣದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ಬಿಜೆಪಿಯ ಸಾಕಷ್ಟು ಹಿರಿಯರ ಬೆಂಬಲ, ಸಹಕಾರ ಸಿಕ್ಕಿದೆ, ಎಲ್ಲರಿಗೂ ಧನ್ಯವಾದ ಎಂದರು.
ಐದು ವರ್ಷದ ಹಿಂದೆ ಮೋದಿಯವ್ರು ಮಂಡ್ಯಕ್ಕೆ ಬಂದಿದ್ರು. ಅವರೂ ನನ್ನ ಪರ ಮತ ಕೇಳಿ ಜನರ ಸಹಕಾರ ಕೇಳಿದ್ರು, ಇದನ್ನು ನಾನು ಯಾವತ್ತೂ ಮರೆಯಲ್ಲ ಎಂದರು. ಪ್ರಧಾನಿ ಮೋದಿ ಅವರ ನಾಯಕತ್ವ ಗುಣ ಮೆಚ್ಚಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದರು.