alex Certify BIG NEWS : ‘ಪದವಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ‘KSRTC’ ಬಸ್ ಪಾಸ್ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ಪದವಿ’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ‘KSRTC’ ಬಸ್ ಪಾಸ್ ಅವಧಿ ವಿಸ್ತರಣೆ

ಬೆಂಗಳೂರು : 2023-24ನೇ ಸಾಲಿನ ಪದವಿ ವಿದ್ಯಾರ್ಥಿಗಳ ಬಸ್ಪಾಸ್ ಅವಧಿಯನ್ನು ವಿಸ್ತರಿಸಿ ಕೆಎಸ್ ಆರ್ ಟಿಸಿ (KSRTC)   ಸುತ್ತೋಲೆ ಹೊರಡಿಸಿದೆ.

ಏನಿದೆ ಸುತ್ತೋಲೆಯಲ್ಲಿ

ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ದಿನಾಂಕ: 31.03.2024ಕ್ಕೆ ಮುಕ್ತಾಯಗೊಂಡಿದ್ದು, ಸದರಿ ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ವಿಭಾಗಗಳಿಂದ ದೂರವಾಣಿ ಮುಖೇನ ಕೋರುತ್ತಿರುವುದನ್ನು ಪರಿಶೀಲಿಸಲಾಯಿತು.

ಈಗಾಗಲೇ ಉಲ್ಲೇಖ-1 ರ ಸಾಮಾನ್ಯ ಸ್ಥಾಯಿ ಆದೇಶದನ್ವಯ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತಾ ಅವಧಿ ಮುಕ್ತಾಯಗೊಂಡ ನಂತರ ಒಂದು ಅಥವಾ ಎರಡು ತಿಂಗಳ ಅವಧಿಗೆ ಬಸ್ ಪಾಸ್ ಅವಧಿ ವಿಸ್ತರಿಸಿ ನೀಡಲು ಅವಕಾಶವಿದ್ದು, ತಮ್ಮ ಹಂತದಲ್ಲಿಯೇ ಬಸ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳದೇ, ವಿದ್ಯಾರ್ಥಿಗಳಿಗೆ ಅನಾನುಕೂಲ ಮಾಡುತ್ತಿರುವುದು ಸಮಂಜಸವಿರುವುದಿಲ್ಲ. ಆದಾಗ್ಯೂ ಈ ನಿಟ್ಟಿನಲ್ಲಿ ಕೆಳಕಂಡಂತೆ ಕ್ರಮವಹಿಸುವಂತೆ ತಿಳಿಸಲಾಗಿದೆ.

1. ದಿನಾಂಕ: 31.03.2024 ರಂದು ಮುಕ್ತಾಯವಾಗುವ ವಿದ್ಯಾರ್ಥಿ ಬಸ್ ಪಾಸುಗಳನ್ನು. ಪರೀಕ್ಷೆ ವೇಳಾಪಟ್ಟಿಗೆ ಅನುಗುಣವಾಗಿ ಮಾನ್ಯತಾ ಅವಧಿಯನ್ನು ಒಂದು ತಿಂಗಳು ಅಥವಾ ಗರಿಷ್ಠ ಎರಡು ತಿಂಗಳ ಅವಧಿಗೆ ವಿಸ್ತರಣೆ ಮಾಡುವುದು.

2. ಪಾಸ್ಗಳ ವಿಸ್ತರಣೆಗಾಗಿ ನಿಯಮಾವಳಿಯಂತೆ ಒಂದು / ಎರಡು ತಿಂಗಳ ಶುಲ್ಕ ಹಾಗೂ ಸಂಸ್ಕರಣ ಶುಲ್ಕವನ್ನು ಪಾವತಿಸಿಕೊಂಡು, ಸದರಿ ರಶೀದಿಯಲ್ಲಿ ವಿದ್ಯಾರ್ಥಿಯ ಹೆಸರು ಹಾಗೂ ಬಸ್ ಪಾಸಿನ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು.

3. 2023-24ನೇ ಸಾಲಿನ ಬಸ್ಪಾಸ್ ಮತ್ತು ಶುಲ್ಕ ಪಾವತಿ ರಶೀದಿ ಎರಡನ್ನೂ ತೋರಿಸಿ, ಪಾಸಿನಲ್ಲಿರುವ ಮಾರ್ಗದಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲು ಅವಕಾಶ ಕಲ್ಪಿಸುವುದು.

4. ಮೇಲ್ಕಂಡ ಅಂಶಗಳನ್ವಯ ಮಾನ್ಯತಾ ಅವಧಿ ವಿಸ್ತರಿಸಿರುವ ಬಸ್ ಪಾಸ್ಗಳ ಸಂಖ್ಯೆಯ ವಿವರಗಳನ್ನು ಈ ಕಛೇರಿಗೆ ಒದಗಿಸುವುದು.ಮೇಲ್ಕಂಡಂತೆ ಚಾಲಕ / ನಿರ್ವಾಹಕರುಗಳಿಗೆ ಅಗತ್ಯ ಮಾಹಿತಿ ನೀಡಿ ಸೂಕ್ತ ಕ್ರಮವಹಿಸಲು ಸುತ್ತೋಲೆ ಹೊರಡಿಸಲಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...