ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆ ಜಾರಿಯಾದ ನೀತಿ ಸಂಹಿತೆ ಪರಿಣಾಮ ರಾಜ್ಯದಲ್ಲಿ ಈವರೆಗೆ 30.19 ಕೋಟಿ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಮಾ.16ರಿಂದ ನಿನ್ನೆಯವರೆಗೆ ಅಬಕಾರಿ ಅಧಿಕಾರಿಗಳು, ಪೊಲೀಸರು ಸೇರಿ ವಿವಿಧ ತಂಡಗಳು ನಡೆಸಿದ ಕಾರ್ಯಾಚರಣೆಯಲ್ಲಿ ರಾಜ್ಯದಲ್ಲಿ ಒಟ್ಟು 30,19,88,517 ರೂ. ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಇದುವರೆಗೆ 1,31,92,49,175 ರೂ. ಮೌಲ್ಯದ 1,32, 59,894.85 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. 1,75,43,093 ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಹಾಗೂ 287.18 ಕೆಜಿ ತೂಕದ 3,13,55,960 ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 9,93,80,132 ರೂ. ಮೌಲ್ಯದ 16.02 ಕೆಜಿ ಚಿನ್ನ, 27,23,150 ರೂ. ಮೌಲ್ಯದ 59.04 ಕೆಜಿ ಬೆಳ್ಳಿ ಹಾಗೂ 9 ಲಕ್ಷ ಮೌಲ್ಯದ 21.17 ಕ್ಯಾರೆಟ್ ಮೌಲ್ಯದ ವಜ್ರಾಭರಣ ಜಪ್ತಿ ಮಾಡಲಾಗಿದೆ.