ವಿಜಯಪುರ : ಕೊಳಗೆ ಬಾವಿಗೆ ಬಿದ್ದ ಸಾತ್ವಿಕ್ ನನ್ನು ಹೊರಕ್ಕೆ ಕರೆತರಲಾಗಿದೆ, ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಚಿವ ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.ಹಾಗೂ ಕಾರ್ಯಾಚರಣೆಯ ಕೊನೆಯ ಕ್ಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ಕೊಳವೆ ಬಾವಿಗೆ ಬಿದ್ದಿದ್ದ 14 ತಿಂಗಳ ಮಗು ಸಾತ್ವಿಕ್ ಹೊರ ಜಗತ್ತನ್ನು ನೋಡುವಂತಾಗಿದ್ದಾನೆ. ಸತತ 20 ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ನಮ್ಮ ಹೆಮ್ಮೆಯ ಎಸ್ ಡಿ ಆರ್ ಎಫ್, ಪೊಲೀಸ್ ತಂಡ, ವಿಜಯಪುರ ಜಿಲ್ಲಾ ಆಡಳಿತಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ನಮ್ಮೆಲ್ಲ ಜನರಲ್ಲಿ ಒಂದು ಮನವಿ: ದಯಮಾಡಿ ನೀರು ಬಾರದ, ನೀರು ನೀಡುತ್ತಿರುವ ಕೊಳವೆಬಾವಿಗಳನ್ನು ಉಪೇಕ್ಷೆ ಮಾಡದಿರಿ. ಸೂಕ್ತ ಬಂದೋಬಸ್ತ್ ಮಾಡಿ. ಮುಂದೆ ಎಂದೂ ಎಲ್ಲೂ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಸಚಿವ ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.