ಬೆಂಗಳೂರು : ಬೆಂಗಳೂರಲ್ಲಿ ಹಾಡಹಗಲೇ ಚಿರತೆ ಪ್ರತ್ಯಕ್ಷವಾಗಿದ್ದು, ಬಿಎಂಟಿಸಿ ಬಸ್ ಗೆ ಚಿರತೆ, ಹಾಗೂ ಅದರ ಮರಿ ಅಡ್ಡ ಬಂದು ನಂತರ ಬಸ್ ಚಾಲಕನ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದೆ.
ಚಿರತೆ ಹಾಗೂ ಅದರ ಮರಿ ಕಂಡ ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದು, ತಾಯಿ ಚಿರತೆ ತಪ್ಪಿಸಿಕೊಂಡಿದೆ. ಚಿರತೆಯ ಮರಿ ಬಸ್ ಚಾಲಕನ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿ ಬಸ್ ನ ಅಡಿ ಅವಿತುಕುಳಿತಿದೆ.
ನಂತರ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಲಾಗಿದೆ ಎಂದು ತಿಳಿದು ಬಂದಿದೆ.
ಹಾಡಹಗಲೇ ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ತಾಯಿ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.