ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ಇಂದು ನಾಮಪತ್ರ ಸಲ್ಲಿಸಿದರು. ಸುನಿಲ್ ಬೋಸ್ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ರ್ಯಾಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಮತ್ತಿತರಿದ್ದರು.
ಅದೇ ರೀತಿ ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಒಕ್ಕಲಿಗ ಸಮಾಜದ ಸಾಮಾನ್ಯ ಕುಟುಂಬದಿಂದ ಬಂದಿರುವ ಲಕ್ಷಣ್ ಅವರು ತಮ್ಮ ಹೋರಾಟದ ಮನೋಭಾವ, ಪಕ್ಷ ನಿಷ್ಠೆ ಮತ್ತು ಜನಾನುರಾಗಿ ವ್ಯಕ್ತಿತ್ವದಿಂದಾಗಿ ಇಂದು ಈ ಹಂತದ ವರೆಗೆ ಬೆಳೆದಿದ್ದಾರೆ. ಲಕ್ಷ್ಮಣ್ ಮೈಸೂರಿನ ಮನೆಮಗ, ನಮ್ಮ ನಿಮ್ಮೆಲ್ಲರ ಧ್ವನಿ, ಸಂಸತ್ತಿನಲ್ಲಿ ನಮ್ಮ ಧ್ವನಿ ಮೊಳಗಬೇಕಾದರೆ ಲಕ್ಷ್ಮಣ್ ಬೆಂಬಲಕ್ಕೆ ಕ್ಷೇತ್ರದ ಮತದಾರರು ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದೆ.
ಇಲ್ಲಿ ಸೇರಿರುವ ಜನಸಾಗರವೇ ನಮ್ಮ ಅಭ್ಯರ್ಥಿಯ ಗೆಲುವನ್ನು ಸಾರಿ ಹೇಳುತ್ತದೆ.ಕೆಪಿಸಿಸಿ ಅಧ್ಯಕ್ಷರಾದ @DKShivakumar, ಗೃಹ ಸಚಿವರಾದ @DrParameshwara, ಸಮಾಜ ಕಲ್ಯಾಣ ಸಚಿವರಾದ @CMahadevappa,… pic.twitter.com/OQHi4DiZw4
— Siddaramaiah (@siddaramaiah) April 3, 2024

