ದಾವಣಗೆರೆ : ಹರಿಹರ ತಾಲ್ಲೂಕಿನ ಹಾಲಿವಾಣ ಗ್ರಾಮದಲ್ಲಿ ಏಪ್ರಿಲ್ 1 ರಿಂದ 5 ರವರೆಗೆ ಶ್ರೀ ಏಳೂರು ಕರಿಯಮ್ಮ ದೇವಿ ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಾಣಿಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಆದೇಶಿಸಿದ್ದಾರೆ.
ಜಾತ್ರೆ ನಡೆಯುವ ಸ್ಥಳ ಹಾಗೂ ದೇವಸ್ಥಾನಗಳಲ್ಲಿ ಮತ್ತು ಆವರಣದಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಸಾರ್ವಜನಿಕ ಹಿತದೃಷ್ಟಿ, ಪರಿಸರ ನೈರ್ಮಲ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಲಿವಾಣ ಶ್ರೀ ಏಳೂರು ಕರಿಯಮ್ಮ ದೇವಿ ಜಾತ್ರೆಯಲ್ಲಿ ದೇವಸ್ಥಾನದ ಅಥವಾ ಜಾತ್ರಾ ಆವರಣದ ಪ್ರದೇಶದೊಳಗೆ ಭಕ್ತಾಧಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ, ಕೋಣ ಬಲಿ ಕೊಡುವಂತಹ ಕೃತ್ಯ ನಿಷೇಧಿಸಿ, ಮಾರಕಾಸ್ತ್ರಗಳನ್ನು ತರುವುದು ಹಾಗೂ ಇತರೆ ಅನಾಗರೀಕ ಪದ್ದತಿ ಆಚರಣೆಯಲ್ಲಿ ಭಾಗಿಯಾದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ