ಬೆಂಗಳೂರು : ಸ್ಕೂಟರ್ ನಲ್ಲಿ ಮಹಿಳೆಯಿದ್ದ ಕಾರನ್ನು ಹಿಂಬಾಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬೆಂಗಳೂರು ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಸ್ಕೂಟರ್ ನಲ್ಲಿ ಬಂದ ಪುರುಷರ ಕ್ಯಾಬ್ ಕಾರನ್ನು ಹಿಂಬಾಲಿಸಿ, ಕಿಟಕಿಗಳನ್ನು ಬಡಿದು ಅದರ ಬಾಗಿಲುಗಳನ್ನು ಓಪನ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಮೂವರು ಪುರುಷರು ತಮ್ಮ ವಾಹನವನ್ನು ಬೆನ್ನಟ್ಟುತ್ತಿದ್ದಂತೆ ಮಹಿಳೆ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ ಆಗ್ನೇಯ ಪೊಲೀಸ್ ಡಿಸಿಪಿ ಸಿ.ಕೆ.ಬಾಬಾ, ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.