ಬೆಂಗಳೂರು : ಟ್ರಕ್ ಹರಿದು 5 ವರ್ಷದ ಬಾಲಕ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.
ಮೃತ ಬಾಲಕನನ್ನು ಅಶ್ವಿತ್ (5) ಎಂದು ಗುರುತಿಸಲಾಗಿದೆ. ಊರ್ವಶಿ ಥಿಯೇಟರ್ ಬಳಿ ಈ ಅವಘಡ ನಡೆದಿದೆ. ಶೌಚಾಲಯಕ್ಕೆ ತೆರಳಿದ್ದ ಬಾಲಕ ಅಶ್ವಿತ್ ಲಾರಿಯ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಸಿಟಿ ಮಾರ್ಕೆಟ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.