ಬೀದರ್ : ಪೊಲೀಸ್ ಇಲಾಖೆಯಲ್ಲಿ 10 ವರ್ಷ ಕಾಲ ಸೇವೆ ಸಲ್ಲಿಸಿದ್ದ ಬ್ರುನೋ ಶ್ವಾನ ಮೃತಪಟ್ಟಿದೆ.
ರಾಜ್ಯಾದ್ಯಂತ ಗಣ್ಯವ್ಯಕ್ತಿಗಳ ಭೇಟಿ ಸಂದರ್ಭ ಎಎಸ್ಸಿ ತಂಡದೊಂದಿಗೆ ಭದ್ರತಾ ತಪಾಸಣಾ ಕಾರ್ಯ ಚುರುಕಾಗಿ ಭಾಗಿಯಾಗಿದ್ದು ಹಾಗೂ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಮತ್ತು ಇತರೆ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಗಳಲ್ಲಿ ಕೂಡ ಭಾಗಿಯಾಗಿ ಪದಕ ಗಳಿಸಿತ್ತು.
ಪ್ರಧಾನಮಂತ್ರಿ, ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡುವ ಸ್ಥಳಗಳ ಪರಿಶೀಲನೆ ನಡೆಸುವ ಕೆಲಸವನ್ನ ಬ್ರುನೋ ಶ್ವಾನ ಮಾಡುತ್ತಿತ್ತು. ಅಲ್ಲದೇ ಹಲವು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಬ್ರುನೋ ಶ್ವಾನ ಮಹತ್ವದ ಪಾತ್ರ ವಹಿಸಿತ್ತು.