alex Certify ವಾಹನ ಸವಾರರ ಜೇಬಿಗೆ ಕತ್ತರಿ ; ನಾಳೆಯಿಂದ ಈ ಟೋಲ್ ಗಳ ಶುಲ್ಕ ಹೆಚ್ಚಳ |Toll Price Hike | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರ ಜೇಬಿಗೆ ಕತ್ತರಿ ; ನಾಳೆಯಿಂದ ಈ ಟೋಲ್ ಗಳ ಶುಲ್ಕ ಹೆಚ್ಚಳ |Toll Price Hike

ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದ್ದು, ನಾಳೆಯಿಂದ ( ಏಪ್ರಿಲ್ 1) ಈ ಟೋಲ್ ಗಳ ಶುಲ್ಕ ಹೆಚ್ಚಳವಾಗಲಿದೆ.

1) ಮೈಸೂರು – ಬೆಂಗಳೂರು

ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ದರ ಏರಿಕೆಯಾಗುತ್ತಿದ್ದು, ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ.ಜೂನ್ನಲ್ಲಿಶೇ.22 ರಷ್ಟು ಟೋಲ್ ದರ ಏರಿಕೆಯಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008-ನಿಯಮ 5ರ ಪ್ರಕಾರ ಬಳಕೆದಾರರ ಶುಲ್ಕ ದರದ ವಾರ್ಷಿಕ ಪರಿಷ್ಕರಣೆಯಂತೆ ಮತ್ತೆ ಟೋಲ್ ದರ ಹೆಚ್ಚಳ ಮಾಡಲಾಗಿದೆ.

ಕಾರು ಏಕಮುಖ ಸಂಚಾರ 170, ದ್ವಿಮುಖ ಸಂಚಾರ 255, ಲಘು ವಾಣಿಜ್ಯ ವಾಹನ ಏಕಮುಖ 270, ದ್ವಿಮುಖ ಸಂಚಾರ 415, ಟ್ರಕ್ ಬಸ್ ಏಕಮುಖ 580, ದ್ವಿಮುಖ 870 , ಮೂರು ಆಕ್ಸೆಲ್ ವಾಣಿಜ್ಯ ವಾಹನ 635 , ದ್ವಿಮುಖ 950, ದೊಡ್ಡ ಗಾತ್ರದ ವಾಹನ 1080 ರಿಂದ 1620, 4 ಅಥವಾ ಆರು ಆಕ್ಸೆಲ್ ನ ವಾಹನ ಏಕಮುಖ 1110, ದ್ವಿಮುಖ 1660 . ಆಗಿದೆ.

2)ಬಂಟ್ವಾಳ

ಕರಾವಳಿಯಲ್ಲಿರುವ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು ಕೇರಳ- ಕರ್ನಾಟಕ ಗಡಿಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಗಳಲ್ಲಿ ಪರಿಷ್ಕ್ರತ ಶುಲ್ಕ ಜಾರಿಗೆ ಬರಲಿದೆ. ಬ್ರಹ್ಮರಕೂಟ್ಲು ಟೋಲ್ ನಲ್ಲಿ ಕಾರು, ಜೀಪು, ವ್ಯಾನ್ ದ್ವಿಮುಖ ಸಂಚಾರದ ಶುಲ್ಕದಲ್ಲಿ 5 ರೂ. ಏರಿಕೆ ಕಂಡಿದ್ದು ಪರಿಷ್ಕ್ರತ ದರ 50 ರೂ. ಆಗಿರಲಿದೆ. ತಲಪಾಡಿಯಲ್ಲಿ 80 ರೂ, ಹೆಜಮಾಡಿಯಲ್ಲಿ 75, ಸಾಸ್ತಾನ ಗುಂಡ್ಮಿ 90 ರೂ. ಪರಿಷ್ಕ್ರತ ದರವಾಗಿದೆ.

ಹಾಗೂ ಮುಂಬೈನ ರಾಜೀವ್ ಗಾಂಧಿ ಬಾಂದ್ರಾ ವರ್ಲಿ ಸೀ ಲಿಂಕ್ ನಲ್ಲಿ ಏಕಮುಖ ಪ್ರಯಾಣವು ಏಪ್ರಿಲ್ 1 ರಿಂದ ಹೆಚ್ಚು ದುಬಾರಿಯಾಗಲಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್ಆರ್ಡಿಸಿ) ಸೇತುವೆಯ ಟೋಲ್ ಹೆಚ್ಚಳವನ್ನು ಘೋಷಿಸಿದ್ದು, ಇದು ಶೇಕಡಾ 18 ರಷ್ಟು ದುಬಾರಿಯಾಗಿದೆ.

3) ಮುಂಬೈ

ವರ್ಲಿ ಸೀ ಲಿಂಕ್ನಲ್ಲಿ ಒನ್-ವೇ ಡ್ರೈವ್ಗೆ 100 ರೂ. ಈ ಮೊತ್ತವನ್ನು ಎಲ್ಲಾ ಕಾರುಗಳು ಮತ್ತು ಜೀಪ್ ಗಳಿಗೆ ಅನ್ವಯಿಸಲಾಗುವುದು, ಇದನ್ನು 80 ರೂ.ಗಳಿಂದ ಹೆಚ್ಚಿಸಲಾಗಿದೆ. ಟ್ರಕ್ ಚಾಲಕರು, ಮಿನಿ ಬಸ್ ಗಳು ಮತ್ತು ಟೆಂಪೊಗಳು ಸುಮಾರು 160 ರೂ.ಗಳನ್ನು ಪಾವತಿಸಬೇಕಾಗುತ್ತದೆ, ಬಸ್ ಗಳು ಮತ್ತು 2-ಆಕ್ಸಲ್ ಟ್ರಕ್ ಗಳು ಸೇರಿದಂತೆ ಭಾರಿ ವಾಹನಗಳಿಗೆ ಈಗ 210 ರೂ.ವಿಧಿಸಲಾಗುತ್ತದೆ.

4) ಚೆನ್ನೈ ಮತ್ತು ಬೆಂಗಳೂರು

ತಮಿಳುನಾಡಿನ ರಾಜಧಾನಿಯ ಹೊರವಲಯದಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ಶುಲ್ಕವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಸಿದ್ಧತೆ ನಡೆಸುತ್ತಿರುವುದರಿಂದ ಚೆನ್ನೈ ಮತ್ತು ಬೆಂಗಳೂರು ನಡುವಿನ ರಸ್ತೆ ಪ್ರಯಾಣವು ಹೆಚ್ಚು ದುಬಾರಿಯಾಗಲಿದೆ.

ಪ್ರತಿ ಟ್ರಿಪ್ ಗೆ 5 ರಿಂದ 20 ರವರೆಗೆ ಟೋಲ್ ಶುಲ್ಕ ಹೆಚ್ಚಳವು ಏಪ್ರಿಲ್ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ.
ಬೆಂಗಳೂರು ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಏಪ್ರಿಲ್ 1 ರಿಂದ ವೆಚ್ಚಗಳಲ್ಲಿ ಗಣನೀಯ ಏರಿಕೆಯನ್ನು ಎದುರಿಸಬೇಕಾಗುತ್ತದೆ.ತಮಿಳುನಾಡಿನಾದ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಲ್ಲಿರುವ ಹಲವಾರು ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳವು 150 ರೂ.ಗೆ ತಲುಪಲಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...