ಬೆಂಗಳೂರು : ಚನ್ನಪಟ್ಟಣದ ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಪುತ್ರಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಯಲಿದ್ದು, ಅಪ್ಪನಿಗೆ ಟಕ್ಕರ್ ಕೊಟ್ಟು ಮಗಳು ನಿಶಾ ಕಾಂಗ್ರೆಸ್ ಕದ ತಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಸೇರ್ಪಡೆಗೆ ನಿಶಾ ಯೋಗೇಶ್ವರ್ ತುದಿಗಾಲಲ್ಲಿ ನಿಂತಿದ್ದು, ಡಿಕೆ ಬ್ರದರ್ಸ್ ಗ್ರೀನ್ ಸಿಗ್ನಲ್ ಒಂದೇ ಬಾಕಿಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅಪ್ಪ ಮಗಳನ್ನು ದೂರ ಮಾಡಲ್ಲ, ಅದಕ್ಕಾಗಿ ನಾನು ಸುಮ್ಮನಿದ್ದೇನೆ ಎಂದು ಹೇಳಿದ್ದಾರೆ.
ನಿಶಾ ಯೋಗೇಶ್ವರ್ ಧೈರ್ಯವಂತ ಹೆಣ್ಣು ಮಗಳು, ಆಕೆ ಕಾಂಗ್ರೆಸ್ ಬರೋಕೆ ರೆಡಿಯಾಗಿದ್ದಾರೆ. ಅಪ್ಪ ಮಗಳ ನಡುವೆ , ಅವರ ಕುಟುಂಬದಲ್ಲಿ ಏನೇನಿದೆಯೋ ಗೊತ್ತಿಲ್ಲ. ಇವತ್ತಲ್ಲ ನಾಳೆ ಸರಿ ಹೋಗಬಹುದು. ಅಪ್ಪ-ಮಗಳನ್ನು ದೂರ ಮಾಡಬಾರದು ಎಂದು ನಾನು ಇನ್ನೂ ತೀರ್ಮಾನ ಕೈಗೊಂಡಿಲ್ಲ, ನಾಳೆ ಆ ಹೆಣ್ಣು ಮಗಳಿಗೆ ಮದುವೆ ಮಾಡಬೇಕು, ಅಕ್ಷತೆ ಹಾಕಬೇಕು. ಹಾಗಾಗಿ ನಾನು ಅಪ್ಪ-ಮಗಳನ್ನು ದೂರ ಮಾಡಬಾರದು ಎಂದು ನಾನು ಸುಮ್ಮನಿದ್ದೇನೆ ಎಂದರು.