ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾರ್ಟ್ ಆಪರೇಷನ್ ಆಗುವಾಗ ನಾನು ಇದ್ದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿ ಎನ್ ಮಂಜುನಾಥ್ ಹೇಳಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾರ್ಟ್ ಆಪರೇಷನ್ ಆಗುವಾಗ ನಾನು ಇದ್ದೆ, ಆಪರೇಷನ್ ಬಗ್ಗೆ ತಿಳಿದುಕೊಳ್ಳಲು ಬಹಳ ಜ್ಞಾನ ಇರಬೇಕು, ಕೆಲವು ವೈದ್ಯರಿಗೆ ಇದರ ಬಗ್ಗೆ ಗೊತ್ತಾಗುವುದಿಲ್ಲ. ಇನ್ನೂ ಸಾಮಾನ್ಯ ಜನರಿಗೆ ಹೇಗೆ ಗೊತ್ತಾಗುತ್ತದೆ. ಯಾವುದೇ ಮಾಹಿತಿ ಇಲ್ಲದೇ , ತಿಳುವಳಿಕೆ ಇಲ್ಲದೇ ಮಾತನಾಡಬಾರದು ಎಂದು ಹೇಳಿದರು.
ಚುನಾವಣೆ ಬಂದಾಗ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗುತ್ತಾರೆ : ಶಾಸಕ ರಮೇಶ್ ಬಂಡಿಸಿದ್ದೇಗೌಡ
ಚುನಾವಣೆ ಬಂದಾಗ ಕುಮಾರಸ್ವಾಮಿಗೆ ಹೃದಯದ ಸಮಸ್ಯೆ ಬರುತ್ತದೆ, ಚುನಾವಣೆ ಬಂದಾಗ ಆಸ್ಪತ್ರೆಗೆ ದಾಖಲಾಗೋದು ಮಾಮೂಲಾಗಿದೆ. ಆಸ್ಪತ್ರೆಯಿಂದ ಹೊರಬಂದ ಮೂರೇ ದಿನಕ್ಕೆ ರಾಜ್ಯ ಸುತ್ತಾಡುತ್ತಿದ್ದಾರೆ. ಅದು ಹೇಗೆ ಅಂತ ಮಾತ್ರ ಅರ್ಥ ಆಗುತ್ತಿಲ್ಲ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದರು. ರಮೇಶ್ ಬಂಡಿಸಿದ್ದೇಗೌಡ ಹೇಳಿಕೆಗೆ ಹೆಚ್ಡಿಕೆ ಬೆಂಬಲಿಗರು ಕಿಡಿಕಾರಿದ್ದರು.
ಚಲುವರಾಯಸ್ವಾಮಿ ಅವರಿಗೂ ಅದೇ ರೀತಿ ಹೃದಯದ ಸಮಸ್ಯೆ ಇದೆ. ಇವರು ಆಸ್ಪತ್ರೆ ಸೇರಿದರೆ ತಿಂಗಳಾನುಗಟ್ಟಲೆ ಹೊರಗೆ ಬರಲ್ಲ. ಆದರೆ, ಕುಮಾರಸ್ವಾಮಿ ಅವರು ಆಪರೇಷನ್ ಆದ ಎರಡೇ ದಿನಕ್ಕೆ ಹೊರಗೆ ಬರುತ್ತಾರೆ. ಈ ಹೊಸ ಟೆಕ್ನಿಕ್ ಹೇಗೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದಿದ್ದರು