alex Certify ‘EEDS’ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ಸಲ್ಲಿಸುವಂತೆ ‘ಶಿಕ್ಷಣ ಇಲಾಖೆ’ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘EEDS’ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ಸಲ್ಲಿಸುವಂತೆ ‘ಶಿಕ್ಷಣ ಇಲಾಖೆ’ ಸೂಚನೆ

ಬೆಂಗಳೂರು : 2023-24ನೇ ಸಾಲಿನಲ್ಲಿ ಶಿಕ್ಷಕರ ಕೋರಿಕೆ ವರ್ಗಾವಣೆಗೆ ಸಂಬಂಧಿಸಿದ ಪೂರ್ವಭಾವಿ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತಿರುವುದರಿಂದ ಶಿಕ್ಷಕರ ಸೇವಾವಿವರಗಳನ್ನು ಅವರ ಸೇವಾವಹಿಯಂತ ಪರಿಶೀಲಿಸಿ ಇಇಡಿಎಸ್ ತಂತ್ರಾಂಶದಲ್ಲಿ ಗಣಕೀಕರಿಸಿ ಅಂತಿಮಗೊಳಿಸುವಂತೆ ಹಾಗೂ ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲಾ ವ್ಯಾಪ್ತಿಯ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿತ್ತು.

ಈ ನಡುವೆ ದಿನಾಂಕ:26/03/2024 ರವರೆಗೆ ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಶಾಲೆಗಳ ಬದಲಾಗಿರುವ ವಲಯಗಳ ಗಣಕೀಕರಣ ಕಾರ್ಯವನ್ನು ಕೈಗೊಂಡಿದ್ದು ತಾಂತ್ರಿಕ ಕಾರಣಕ್ಕೆ ಇಇಡಿಎಸ್ ತಂತ್ರಾಂಶವನ್ನು Freeze ಮಾಡಲಾಗಿತ್ತು.ಈಗ ಇಇಡಿಎಸ್ ತಂತ್ರಾಂಶವನ್ನು Un Freeze ಮಾಡಲಾಗಿದ್ದು ಎಲ್ಲಾ ಬಟವಾಡೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರ ಸೇವಾವಿವರಗಳನ್ನು ಅವರ ಸೇವಾವಹಿಯಂತೆ ಪರಿಶೀಲಿಸಿ ಇಇಡಿಎಸ್ ತಂತ್ರಾಂಶದ ಯಾವುದೇ ಅಂಕಣಗಳು ಖಾಲಿ ಉಳಿಯದಂತೆ ಸಮರ್ವಕ ಮತ್ತು ಕರಾರುವಕ್ಕಾದ ವಿವರಗಳನ್ನು ಗಣಕೀಕರಿಸಲು ಸೂಚನೆ ನೀಡಿದೆ.

ಸದರಿ ವಿಷಯದಲ್ಲಿ ನಿರ್ಲಕ್ಷ್ಯವಹಿಸದೇ ಜವಾಬ್ದಾರಿಯುತವಾಗಿ ಪ್ರಥಮಾದ್ಯತೆ ಮೇರೆಗೆ ಪರಿಗಣಿಸಿ ಸದರಿ ಕಾರ್ಯವನ್ನು ಪೂರೈಸುವುದು. ಒಂದು ವೇಳೆ ತಮ್ಮ ಉದಾಸೀನತೆಯಿಂದ ವ್ಯತ್ಯಯಗಳುಂಟಾಗಿ ಶಿಕ್ಷಕರ ವರ್ಗಾವಣೆ ಸಮಯದಲ್ಲಿ ಲೋವ ಉಂಟಾದಲ್ಲಿ ನಂಬಂಧಿಸಿದ wwad ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು.ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಮೇಲ್ವಿಚಾರಣೆ ಕೈಗೊಂಡು ಕಾರ್ಯ ಪೂರೈಕೆ ಆಗಿರುವ ಬಗ್ಗೆ ಖಾತರಿಪಡಿಸಿಕೊಂಡು ಪರಿಶೀಲನಾ ವರದಿಯನ್ನು ತುರ್ತಾಗಿ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...