ಚಿಕ್ಕಬಳ್ಳಾಪುರ : ಐದು ಜನ ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಪತಿ ಗೋಪಾಲ್ ನೀಡಿದ ಕಿರುಕುಳದ ಹಿನ್ನೆಲೆ ಮನನೊಂದು ತಾಯಿ ತನ್ನ ಐದು ಜನ ಹೆಣ್ಣು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಅನಿತಾ ಹಾಗೂ ಆಕೆಯ ಐದು ಜನ ಹೆಣ್ಣು ಮಕ್ಕಳಾದ ಲಾವಣ್ಯ (11), ಧರಣಿ (9), ಕಾವ್ಯ (8), ರಕ್ಷಿತಾ (5), ಶ್ರೀವಲ್ಲಿ (2) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಮೊದಲು ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ದಾಖಲಿಸಲಾಗಿದೆ. ಗರ್ಭಿಣಿಯಾಗಿರುವ ತಾಯಿ ಅನಿತಾ ಅವರಿಗೆ ಐ.ಸಿ.ಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.